Advertisement

ಭಾರತದ ಮುಸ್ಲಿಮರು ಜ್ಞಾನವಂತರು: ಮೋಹನ್‌ ಭಾಗವತ್‌

10:53 AM Oct 10, 2020 | Nagendra Trasi |

ನವದೆಹಲಿ: ಭಾರತೀಯ ಮುಸ್ಲಿಮರು ವಿಶ್ವದ ಇತರ ದೇಶಗಳ ಮುಸ್ಲಿಮರಿಗಿಂತ ಹೆಚ್ಚು ತಿಳಿವಳಿಕೆಯನ್ನು ಹೊಂದಿರುವವರು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ಹಿಂದಿ ಭಾಷೆಯ ವಿವೇಕ್‌ ಎಂಬ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಹೀಗೆ ಹೇಳಿರುವ ಅವರು, ಮುಸ್ಲಿಮರಲ್ಲಿ ಧರ್ಮಾಂಧತೆ, ಪ್ರತ್ಯೇಕತೆ ಭಾವನೆಯನ್ನು ಯಾರೋ ಸ್ವಾರ್ಥಿಗಳು ಬಿತ್ತುತ್ತಿದ್ದಾರೆ ಎಂದು ಹೇಳಿದ್ದಾರೆ.

“ಭಾರತದ ಮೇಲೆ ಪರಕೀಯರ ದಬ್ಟಾಳಿಕೆಯನ್ನು ವಿರೋಧಿಸಿ ಹೋರಾಡಿದವರಲ್ಲಿ ಮುಸ್ಲಿಮರೂ ಸೇರಿದ್ದಾರೆ. ಮೇವಾಡದ ಮಹಾರಾಜ ಪ್ರತಾಪ್‌ ಸಿಂಗ್‌ ಅವರ ಸೇನೆಯು, ಮೊಘಲರ ದೊರೆ ಅಕºರನ ವಿರುದ್ಧ ಹೋರಾಡಿದಾಗ ಸಿಂಗ್‌ ರವರ ಸೇನೆಯಲ್ಲಿ ಮುಸ್ಲಿಮರೂ ಹೋರಾಡಿದ್ದಾರೆ. ಭಾರತೀಯ ಸ್ವಾತಂತ್ರ್ಯಹೋರಾಟದಲ್ಲೂ ಅನೇಕ ಮುಸ್ಲಿಮರು ಪಾಲ್ಗೊಂಡು ಅನೇಕ ತ್ಯಾಗಗಳನ್ನು ಮಾಡಿದ್ದಾರೆ.

ಭಾರತದ ಸಂಸ್ಕೃತಿಯ ಮೇಲೆ ದಾಳಿ ನಡೆದ ಯಾವುದೇ ಸಂದರ್ಭದಲ್ಲಿ ಅವರು ಹಿಂದೂಗಳ ಜೊತೆಗೆ ಕೈ ಜೋಡಿಸಿ ಹೋರಾಡಿದ್ದಾರೆ ಎಂದು ಭಾಗವತ್‌ ಬಣ್ಣಿಸಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಅಂಥ ಹಕ್ಕುಗಳನ್ನು ನೀಡಲಾಗಿಲ್ಲ. ಆದರೆ, ಭಾರತದ ಲ್ಲಿನ ಮುಸ್ಲಿಮರಿಗೆ ನಮ್ಮ ಸರ್ಕಾರ ಸೂಕ್ತ ಹಕ್ಕುಗಳನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಭೀಮ್‌ ಆರ್ಮಿ, ಪಿಎಫ್ಐ ನಂಟಿಲ್ಲ: ಇ.ಡಿ. ಸ್ಪಷ್ಟನೆ
ಉತ್ತರ ಪ್ರದೇಶದ ಹತ್ರಾಸ್‌ ಅತ್ಯಾಚಾರದುರ್ದೈವಿಯಕುಟುಂಬದ ಬೆಂಬಲಕ್ಕೆ ನಿಂತಿರುವ ಚಂದ್ರಶೇಖರ್‌ ಆಜಾದ್‌ ನೇತೃತ್ವದ ಭೀಮ್‌ ಆರ್ಮಿ ಹಾಗೂ
ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಗಳು ಪರಸ್ಪರ ಯಾವುದೇ ನಂಟು ಹೊಂದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಸ್ಪಷ್ಪಪಡಿಸಿದೆ.

Advertisement

ಅಲ್ಲದೆ, ಹತ್ರಾಸ್‌ ಘಟನೆಯ ಪ್ರತಿಭಟನೆಗಾಗಿ ಪಿಎಫ್ಐ 100ಕೋಟಿ ರೂ.ಗಳನ್ನು ಹೊಂದಿಸಿತ್ತು ಎಂಬ ಆರೋಪಗಳನ್ನು ಇ.ಡಿ. ಅಲ್ಲಗಳೆದಿದೆ. ಇತ್ತೀಚೆಗೆ, ಉತ್ತರ ಪ್ರದೇಶದ ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಬ್ರಿಜ್‌ ಲಾಲ್‌ ಅವರು ಹೇಳಿಕೆ ನೀಡಿ, ಹತ್ರಾಸ್‌ ಪ್ರಕರಣದಲ್ಲಿ ಭೀಮ್‌ ಆರ್ಮಿ ಹಾಗೂ ಪಿಎಫ್ಐ ಪರಸ್ಪರಕೈಜೋಡಿಸಿವೆ. ಅಲ್ಲದೆ, ಪ್ರತಿಭಟನೆಗಾಗಿ 100ಕೋಟಿ ರೂ.ಗಳನ್ನು ಪಿಎಫ್ಐನ ಅಂಗಸಂಸ್ಥೆ ಕ್ಯಾಂಪಸ್‌ ಫ್ರಂಟ್‌ ಆಫ್ ಇಂಡಿಯಾದಿಂದ ಹೊಂದಿಸಲಾ
ಗಿದೆ ಎಂದು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next