ಮೈಸೂರು: ಪ್ರಪಂಚದಲ್ಲಿರುವ ಎಲ್ಲಾ ಸಂಗೀತ ಪ್ರಕಾರಗಳಿಗಿಂತ ಭಾರತೀಯ ಸಂಗೀತ ಪರಂಪರೆ ವಿಭಿನ್ನವಾಗಿದ್ದು, ಭಾರತೀಯ ಸಂಗೀತ ಪರಂಪರೆಗೆ ಪೂಜನೀಯ ಸ್ಥಾನ ನೀಡಲಾಗಿದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜಾnನಂದಜೀ ಮಹಾರಾಜ್ ಹೇಳಿದರು.
ಸ್ವಾತಿ ಪ್ರಕಾಶನದ ವತಿಯಿಂದ ಕುವೆಂಪುನಗರದ ಗಾನ ಭಾರತೀ ವೀಣೆಶೇಷಣ್ಣ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿದುಷಿ ಡಾ.ಗೀತಾ ಸೀತಾರಾಂ ರಚನೆಯ ಸಂತ ತ್ಯಾಗರಾಜ ಗೀತಾಮೃತ ಸೀಡಿ ಮತ್ತು ನಾದಬ್ರಹ್ಮ ರಚನಾಮೃತ-2 ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಪಂಚದಲ್ಲಿರುವ ಎಲ್ಲಾ ಸಂಗೀತಗಳಿಂತ ಭಾರತೀಯ ಸಂಗೀತ ಪರಂಪರೆ ವಿಭಿನ್ನವಾಗಿದ್ದು, ಸಂಗೀತವನ್ನು ಕೇವಲ ಒಂದು ಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಆದರೆ , ಭಾರತೀಯ ಸಂಗೀತ ಪರಂಪರೆ ಪೂಜನೀಯ ಸ್ಥಾನ ನೀಡಲಾಗಿದ್ದು, ಭಾರತೀಯ ಸಂಗೀತದಲ್ಲಿ ಭಕ್ತಿ ಮತ್ತು ಆಧ್ಯಾತ್ಮಕ್ಕೆ ವಿಶೇಷ ಸ್ಥಾನ ನೀಡಲಾಗಿದೆ.
ಸಂಗೀತದ ಮೂಲಕ ಭಗವಂತ ಮತ್ತು ಆಧ್ಯಾತ್ಮವನ್ನು ಒಲಿಸಿಕೊಳ್ಳುವ ಶಕ್ತಿ ಭಾರತೀಯ ಪರಂಪರೆಗಿದ್ದು, ಸಂಗೀತದಲ್ಲಿ ರಾಗವೇ ಅಭಿವ್ಯಕ್ತಿಯಾಗಿರಲಿದೆ ಮತ್ತು ಸಾಹಿತ್ಯಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂದರು.
ಸಂಗೀತಕ್ಕೆ ಮಹಾನ್ ಕೊಡುಗೆ: ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಬಿ.ಕೆ.ರಂಗನಾಥ್ ಮಾತನಾಡಿ, ತ್ಯಾಗರಾಜರು 24 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದರೂ, ನಮಗೆ ಲಭ್ಯವಿರುವುದು ಕೇವಲ 600-700 ಗೀತೆಗಳು ಮಾತ್ರ. ಹೀಗಾಗಿ ಸಂಗೀತಕ್ಕೆ ಮಹಾನ್ ಕೊಡುಗೆಯನ್ನು ನೀಡಿದ ತ್ಯಾಗರಾಜರ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ.
ತ್ಯಾಗರಾಜರು ಶ್ರೀರಾಮನ ಭಕ್ತರಾಗಿದ್ದ ಕಾರಣ ರಾಮನ ಭಕ್ತಿಯಿಂದಲೇ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಅದರಲ್ಲೂ ರಾಮನ ಕುರಿತು ಹೆಚ್ಚಾಗಿ ಗೀತರಚನೆ ಮಾಡಿದ್ದು, ಅವರ ರಾಗ-ತಾಳ, ಸಂಗೀತ ಇಂದಿಗೂ ಮಹತ್ವ ಪಡೆದುಕೊಂಡಿವೆ. ಇಂತಹ ಮಹತ್ವ ಹೊಂದಿರುವ ತ್ಯಾಗರಾಜರ ಕೃತಿಗಳನ್ನು ಡಾ.ಗೀತಾ ಶಿವರಾಮ್ ಅವರು ಕನ್ನಡಕ್ಕೆ ತಂದಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾ ಸಿದರು. ಕಾರ್ಯಕ್ರಮದಲ್ಲಿ ವಿದುಷಿ ಡಾ.ಗೀತಾ ಶಿವರಾಮ್ ಹಾಗೂ ಅವರ ಪತಿ ಶಿವರಾಮ್ ಹಾಜರಿದ್ದರು.