Advertisement

ಭಾರತೀಯ ಮಾಧ್ಯಮ ನನಗಿಷ್ಟ: ಟ್ರಂಪ್‌ ಜೂನಿಯರ್‌

08:15 AM Feb 25, 2018 | Team Udayavani |

ಹೊಸದಿಲ್ಲಿ: “ನಾನು ಭಾರತೀಯ ಮಾಧ್ಯಮಗಳನ್ನು ಇಷ್ಟಪಡುತ್ತೇನೆ. ಏಕೆಂದರೆ, ಅಮೆರಿಕದ ಆಕ್ರಮಣಕಾರಿ ಹಾಗೂ ಒರಟು ಮಾಧ್ಯಮ ಗಳಿಗೆ ಹೋಲಿಸಿದರೆ ಭಾರತೀಯ ಮಾಧ್ಯಮಗಳು ಸೌಮ್ಯ ಮತ್ತು ಸ್ನೇಹಪರ ವಾಗಿವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರ ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ತಿಳಿಸಿದ್ದಾರೆ. ಭಾರತ ಪ್ರವಾಸದಲ್ಲಿರುವ ಅವರು ಶನಿವಾರ ಜಾಗತಿಕ ಉದ್ದಿಮೆ ಶೃಂಗದಲ್ಲಿ ಮಾತನಾಡಿ, ಭಾರತೀಯರಿಗೆ ಎಷ್ಟೇ ಕಷ್ಟವಿದ್ದರೂ ಅವರ ಮೊಗದಲ್ಲಿ ಮಂದಹಾಸವಿರುತ್ತದೆ ಎಂದಿದ್ದಾರೆ. ಇದೇ ವೇಳೆ, ಹಿಂದಿನ ಘಟನೆಯೊಂದನ್ನು ಸ್ಮರಿಸಿ ಕೊಂಡ ಅವರು, “ನಾನು 10 ವರ್ಷಗಳ ಹಿಂದೆಯೂ ಇಲ್ಲಿಗೆ ಬಂದಿದ್ದೆ. ಭಾರತೀಯರ ನಗುವಿನ ಬಗ್ಗೆ ಮಾತನಾಡಿದ್ದೆ. ನನ್ನ ಹೇಳಿಕೆ ಎಲ್ಲರಿಗೂ ಅರ್ಥವಾಗಿತ್ತು. ಆದರೆ, ಮಾರನೇ ದಿನ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯು- “ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ಭಾರತದ ಬಡವರು ನಗುತ್ತಾರೆಂದು ಅವರನ್ನು ಇಷ್ಟಪಡುತ್ತಾರೆ’ ಎಂದು ಬರೆದಿತ್ತು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next