ಸಿಡ್ನಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಭಾರತೀಯ ಮೂಲದ ವ್ಯಕ್ತಿಯೋರ್ವನ ಮೇಲೆ ಸ್ಥಳೀಯ ಪೊಲೀಸರು ಗುಂಡು ಹಾರಿಸಿದ್ದು, ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಮೃತ ಯುವಕನನ್ನು 32 ವರ್ಷದ ಮೊಹಮ್ಮದ್ ರಹಮತುಲ್ಲಾ ಸೈಯದ್ ಅಹಮದ್ ಎಂದು ಗುರುತಿಸಲಾಗಿದೆ. ಈತ ತಮಿಳುನಾಡಿನವನೆಂದು ತಿಳಿದು ಬಂದಿದೆ.
ರೈಲು ನಿಲ್ದಾಣದ ಕ್ಲೀನರ್ ಗೆ ಚುಚ್ಚಿದ ಮತ್ತು ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಕಾರಣ ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಲಾಗಿದೆ.
ಇದನ್ನೂ ಓದಿ:ಶಿಯೊಮಿ 13 ಪ್ರೊ ಬಿಡುಗಡೆ; 4,820 ಎಂಎಎಚ್ ಬ್ಯಾಟರಿ ಸಾಮರ್ಥ್ಯ
Related Articles
ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಅಹ್ಮದ್ ಗೆ ಎದುರಾದರು, ನಂತರ ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು ಎಂದು ವರದಿ ತಿಳಿಸಿದೆ.
ಒಬ್ಬ ಪೊಲೀಸ್ ಅಧಿಕಾರಿ ಮೂರು ಗುಂಡುಗಳನ್ನು ಹಾರಿಸಿದರು, ಅದರಲ್ಲಿ ಎರಡು ಅಹ್ಮದ್ ಅವರ ಎದೆಗೆ ಹೊಡೆಯಿತು ಎಂದು ವರದಿ ಹೇಳಿದೆ.