Advertisement

Missing: ದಾಂಡೇಲಿಯ ಗಣೇಶನಗರದ ಅವಿವಾಹಿತ ಯುವಕ ನಾಪತ್ತೆ

07:17 PM Jul 17, 2024 | Team Udayavani |

ದಾಂಡೇಲಿ : ಸ್ಥಳೀಯ ಗಣೇಶನಗರದ ಅವಿವಾಹಿತ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದು, ಈ ಬಗ್ಗೆ ನಗರ ಪೊಲೀಸ್ ಠಾಣೆಯಿಂದ ಮಾಹಿತಿ ಲಭ್ಯವಾಗಿದೆ.

Advertisement

ಖಾಸಗಿ ಕೋರಿಯರ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಸ್ಥಳೀಯ ಗಣೇಶನಗರದ ನಿವಾಸಿ 27 ವರ್ಷ ವಯಸ್ಸಿನ ಪ್ರವೀಣ್ ತೆಗ್ಗಿ ಎಂಬಾತನೆ ನಾಪತ್ತೆಯಾದ ಯುವಕನಾಗಿದ್ದಾನೆ. ಈತ ಜುಲೈ 3 ರಂದು ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆ ಬಿಟ್ಟು ಹೋದವನು ಈವರೆಗೆ ಮನೆಗೆ ಬಂದಿಲ್ಲ. ಈತನ ಕುಟುಂಬಸ್ಥರು ಹಾಗೂ ಸ್ನೇಹಿತರು ಆತನನ್ನು ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನಿಸಿದರೂ ಯಾವುದೇ ಸುಳಿವೇ ಸಿಕ್ಕಿಲ್ಲ. ಅಂತಿಮವಾಗಿ ಈತನ ತಂದೆ ನಿಂಗಪ್ಪ ಗುರುಪಾದಪ್ಪ ತೆಗ್ಗಿ ಅವರು ಮಗನನ್ನು ಹುಡುಕಿ ಕೊಡುವಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಯುವಕನನ್ನು ಯಾರಾದರೂ ಎಲ್ಲಾದರೂ ನೋಡಿದ್ದಲ್ಲಿ ಅಥವಾ ಈತನ ಬಗ್ಗೆ ಏನಾದರೂ ಮಾಹಿತಿ ದೊರೆತಲ್ಲಿ ತಕ್ಷಣವೇ ದಾಂಡೇಲಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಠಾಣೆ ತಿಳಿಸಿದೆ.

ಇದನ್ನೂ ಓದಿ :Video: ಹೀಗಾದ್ರೆ ಹೇಗೆ… ಕರ್ತವ್ಯದಲ್ಲಿದ್ದ ಪೊಲೀಸರಿಂದ ಠಾಣೆಯಲ್ಲೇ ಎಣ್ಣೆ ಪಾರ್ಟಿ…

Advertisement

Udayavani is now on Telegram. Click here to join our channel and stay updated with the latest news.

Next