Advertisement

Police: ಪತ್ನಿಯನ್ನು 17 ಬಾರಿ ಇರಿದಿದ್ದ ಭಾರತೀಯ ವ್ಯಕ್ತಿಗೆ ಜೀವಾವಧಿ ಶಿಕ್ಷೆ

09:38 PM Nov 06, 2023 | Pranav MS |

ಹೂಸ್ಟನ್‌: ಅಮೆರಿಕದ ಪ್ಲೋರಿಡಾದಲ್ಲಿ 2020ರಲ್ಲಿ ಪತ್ನಿಯನ್ನು 17 ಬಾರಿ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಭಾರತೀಯ ವ್ಯಕ್ತಿಗೆ ಅಮೆರಿಕದ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಬ್ರೋವರ್ಡ್‌ ಹೆಲ್ತ್‌ ಕೋರಲ್‌ ಸ್ಟ್ರಿಂಗ್ಸ್‌ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಮೆರಿನ್‌ ಜಾಯ್‌(26) ಮೃತ ಮಹಿಳೆ.

Advertisement

ಆಕೆಯ ಪತಿ ಭಾರತೀಯ ಪ್ರಜೆ ಫಿಲಿಪ್‌ ಮ್ಯಾಥ್ಯೂ ಶಿಕ್ಷೆಗೆ ಗುರಿಯಾದ ವ್ಯಕ್ತಿ. ದಂಪತಿಗೆ ಒಂದು ಮಗು ಇದೆ. 2020ರಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಮರಳಲು ಜಾಯ್‌ ಸಿದ್ಧವಾಗುತ್ತಿದ್ದರು. ಪಾರ್ಕಿಂಗ್‌ ಸ್ಥಳದಲ್ಲಿ ಅವರನ್ನು ತಡೆದ ಮ್ಯಾಥ್ಯೂ, ಆಕೆಯನ್ನು ಹಿಗ್ಗಾ-ಮುಗ್ಗಾ ಥಳಿಸಿ, ನೆಲಕ್ಕೆ ಕೆಡವಿ ಹರಿತವಾದ ಚೂರಿಯಿಂದ 17 ಬಾರಿ ಇರಿದಿದ್ದ. ನ್ಯಾಯಾಲಯದಲ್ಲಿ ಸಾಕ್ಷ್ಯಗಳಿಂದ ಆರೋಪ ಸಾಬೀತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next