Advertisement

ಯುದ್ಧನೌಕೆಯಿಂದ ಉಡಾಯಿಸಬಲ್ಲ ಮಧ್ಯಮ ಶ್ರೇಣಿಯ ಮಿಸೈಲ್‌ ಟೆಸ್ಟ್‌ ಯಶಸ್ವಿ

05:16 PM Mar 07, 2023 | Team Udayavani |

ನವದೆಹಲಿ: ಯುದ್ಧನೌಕೆಯ ಮೂಲಕ ವಾಯುಪ್ರದೇಶಕ್ಕೆ ಗುರಿಯಿಟ್ಟು ಉಡಾಯಿಸಬಲ್ಲ ಮಧ್ಯಮ ಶ್ರೇಣಿಯ (MRSAM) ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತದ ವಾಯುಪಡೆ ಮಂಗಳವಾರ ಯಶಸ್ವಿಯಾಗಿ ನಡೆಸಿದೆ.

Advertisement

ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆ ʻINS ವಿಶಾಖಪಟ್ಟಣಂʼ ಮೂಲಕ MRSAM- (Medium Range Surface to Air Missile) ಕ್ಷಿಪಣಿಯನ್ನು ಉಡಾಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪರೀಕ್ಷೆ ಯಶಸ್ವಿಯಾಗಿರುವ ಬಗ್ಗೆ ನೌಕಾಪಡೆ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

 

Advertisement

ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರೀಸ್‌ ಮತ್ತು ಭಾರತದ ಡಿಆರ್‌ಡಿಓ ಜಂಟಿಯಾಗಿ ಅಭಿವೃದ್ಧಿಪಡಿಸಿರುವ MRSAM ಅನ್ನು  ಸರ್ಕಾರದ ಅಧೀನದ ಭಾರತ್‌ ಡೈನಮಿಕ್ಸ್‌ನಲ್ಲಿ ತಯಾರಿಸಲಾಗುತ್ತಿದೆ.

ಆತ್ಮನಿರ್ಭರ ಭಾರತ ಮಾಡುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಸಾಬೀತುಪಡಿಸಲು ಇದು ಉತ್ತಮ ಅವಕಾಶ ಎಂದು ನೌಕಾಪಡೆ ಹೇಳಿಕೊಂಡಿದೆ.

ಇದನ್ನೂ ಓದಿ: ಕೋವಿಡ್ ನಂತೆಯೇ ಹರಡುತ್ತದೆ ‘ಎಚ್3ಎನ್2 ವೈರಸ್’; ಮಾಸ್ಕ್- ಅಂತರ ಮತ್ತೆ ಜಾರಿ ಸಾಧ್ಯತೆ!

Advertisement

Udayavani is now on Telegram. Click here to join our channel and stay updated with the latest news.

Next