Advertisement

ಭಾರತೀಯರ ಅಪಹರಣ: ಇರಾಕ್‌ ಜೊತೆ ಸುಷ್ಮಾ ಚರ್ಚೆ

08:45 AM Jul 24, 2017 | Team Udayavani |

ನವದೆಹಲಿ: ಇರಾಕ್‌ನ ಮೊಸೂಲ್‌ನಲ್ಲಿ ಐಸಿಸ್‌ ಉಗ್ರರು ಅಪಹರಿಸಿರುವ 39 ಮಂದಿ ಭಾರತೀಯರ ಬಿಡುಗಡೆ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಇರಾಕ್‌ನ ವಿದೇಶಾಂಗ ಸಚಿವರ ಜೊತೆ ಸೋಮವಾರ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಮೂರು ವರ್ಷಗಳ ಹಿಂದೆ ಉಗ್ರರು ಪಂಜಾಬ್‌ನ 39 ಮಂದಿಯನ್ನು ಅಪಹರಿಸಿದ್ದರು. ಇರಾಕ್‌ ವಿದೇಶಾಂಗ ಸಚಿವ ಇಬ್ರಾಹಿಂ ಅಲ್‌ ಜಫಾರಿ ಸೋಮವಾರದಿಂದ 4 ದಿನ ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಸುಷ್ಮಾ ಅವರು ಅಪಹೃತರ ಕುರಿತು ಪ್ರಸ್ತಾಪಿಸಲಿದ್ದಾರೆ. ಜತೆಗೆ, ವ್ಯಾಪಾರ, ಇಂಧನ, ಸಹಕಾರ ಮತ್ತು ದ್ವಿಪಕ್ಷೀಯ ಸಂಬಂಧ ಬಲವರ್ಧನೆ ಕುರಿತಂತೆಯೂ ಮಾತನಾಡಲಿದ್ದಾರೆ. ಭಾರತಕ್ಕೆ ಬೇಕಾದ ಕಚ್ಚಾ ತೈಲ ಪೂರೈಕೆ ಮಾಡುವ ರಾಷ್ಟ್ರಗಳ ಪೈಕಿ ಇರಾಕ್‌ ಕೂಡ ಒಂದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next