ನವದೆಹಲಿ: ಪ್ರತಿಷ್ಠಿತ ಆಭರಣ ವ್ಯಾಪಾರ ಸಂಸ್ಥೆ ಜೋಯಲುಕ್ಕಾಸ್ ತನ್ನ 23 ಬಿಲಿಯನ್ ರೂಪಾಯಿ ಆರಂಭಿಕ ಸಾರ್ವಜನಿಕ ಷೇರು(IPO) ಹಣವನ್ನು ಹಿಂಪಡೆದಿದೆ. ಮಂಗಳವಾರಷೇರು ಮಾರುಕಟ್ಟೆ ನಿಯಂತ್ರಕ ವೆಬ್ ಸೈಟ್ ನಲ್ಲಿನ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಒಮ್ಮೆ ಆತ್ಮ ಮುಟ್ಟಿ ನೋಡಿಕೊಳ್ಳಲಿ..; ಸಿ.ಟಿ.ರವಿ ವಿರುದ್ಧ ಹೆಚ್.ಡಿ.ತಮ್ಮಯ್ಯ ವಾಗ್ದಾಳಿ
ಇಷ್ಟೊಂದು ಬೃಹತ್ ಮೊತ್ತ(2,300 ಕೋಟಿ ರೂ.)ವನ್ನು ತಕ್ಷಣವೇ ಹಿಂಪಡೆಯಲು ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಜೋಯಲುಕ್ಕಾಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್ ವರದಿ ತಿಳಿಸಿದೆ.
ಜೋಯಲುಕ್ಕಾಸ್ ದಕ್ಷಿಣ ಭಾರತದ ಕೇರಳ ಮೂಲದ್ದಾಗಿದೆ. 68 ನಗರಗಳಲ್ಲಿ ಜೋಯಲುಕ್ಕಾಸ್ ಶೋರೂಂಗಳಿವೆ. ಇದು ಭಾರತದ ಅತೀ ದೊಡ್ಡ ಚಿನ್ನದ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ವರದಿ ವಿವರಿಸಿದೆ.
ಐಪಿಒ ಬುಕ್ ರನ್ನರ್ಸ್ ಗಳಾದ ಎಡೆಲ್ವೈಸ್ ಸರ್ವೀಸ್ ಲಿಮಿಟೆಡ್, ಮೋತಿಲಾಲ್ ಒಸ್ವಾಲ್ ಇನ್ವೆಸ್ಟ್ ಮೆಂಟ್ ಅಡ್ವೈಸರ್ ಲಿಮಿಟೆಡ್, ಹೈಟಾಂಗ್ ಸೆಕ್ಯುರಿಟೀಸ್ ಇಂಡಿಯಾ ಮತ್ತು ಎಸ್ ಬಿಐ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್,
ಭಾರತದಲ್ಲಿ ಚಿನ್ನಾಭರಣಗಳ ಮೇಲೆ ಸಾಂಪ್ರದಾಯಿಕ ಹೂಡಿಕೆಯಾಗಿದ್ದು, ಜಗತ್ತಿನಲ್ಲಿಯೇ ಭಾರತ ಚಿನ್ನದ ಮಾರುಕಟ್ಟೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಕಳೆದ ತಿಂಗಳು ವರ್ಲ್ಡ್ ಗೋಲ್ಡ್ ಕೌನ್ಸಿಲ್ ನೀಡಿರುವ ಮಾಹಿತಿ ಪ್ರಕಾರ, ಚಿನ್ನದ ಬೆಲೆ ಏರಿಕೆಯ ಪರಿಣಾಮ ಭಾರತದಲ್ಲಿ ಶೇ.3ರಷ್ಟು ಚಿನ್ನಾಭರಣಗಳ ಮಾರಾಟದಲ್ಲಿ ಇಳಿಮುಖವಾಗಿದೆ.