Advertisement

ಗೋಲಿ ಶ್ರೀಜೇಶ್‌ ವಿರುದ್ಧ ಹಾಕಿ ಇಂಡಿಯಾ ಶಿಸ್ತುಕ್ರಮ ಸಾಧ್ಯತೆ

06:10 AM Dec 04, 2017 | |

ಹೊಸದಿಲ್ಲಿ: ಹಾಕಿ ಇಂಡಿಯಾದ ಅನುಮತಿ ಪಡೆಯದೇ ಸಹಯಾರ್ಥ ಪಂದ್ಯವೊಂದರಲ್ಲಿ ಪಾಲ್ಗೊಂಡಿದ್ದಕ್ಕಾಗಿ ಭಾರತ ಹಾಕಿ ತಂಡದ ನಾಯಕ ತಥಾ ಗೋಲ್‌ಕೀಪರ್‌ ಶ್ರೀಜೇಶ್‌ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

Advertisement

ಕಳೆದ ಅಕ್ಟೋಬರ್‌ನಲ್ಲಿ ಬಾಲಿವುಡ್‌ ಸೆಲೆಬ್ರಿಟಿ ತಂಡದ ವಿರುದ್ಧ ಮುಂಬೈನಲ್ಲಿ ಭಾರತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ನೇತೃತ್ವದ ಆಲ್‌ ಹಾರ್ಟ್‌ ಎಫ್ಸಿ ತಂಡ ಆಡಿತ್ತು. ಶ್ರೀಜೇಶ್‌ ಈ ವೇಳೆ ಕೊಹ್ಲಿ ತಂಡದ ಪರ ಆಡಿದ್ದರು. ಬಹು ಸಮಯದಿಂದ ಗಾಯದ ಕಾರಣಕ್ಕಾಗಿ ಅವರು ಭಾರತ ಹಾಕಿ ತಂಡದಿಂದಲೇ ಹೊರಗಿದ್ದಾರೆ. ಫ‌ುಟ್ಬಾಲ್‌ ಕೂಟದಲ್ಲಿ ಇವರು ಪಾಲ್ಗೊಂಡಿದ್ದಕ್ಕೆ ಹಾಕಿ ಇಂಡಿಯಾ ಕಾರಣ ಕೇಳಿದೆ. 

ಈ ವೇಳೆ ಶ್ರೀಜೇಶ್‌ ವೈಯಕ್ತಿಕ ಫಿಸಿಯೋ ಅನುಮತಿ ಪಡದೇ ಭಾಗವಹಿಸಿದ್ದೇನೆ ಎಂದು ಉತ್ತರಿಸಿದ್ದಾರೆ. ಈ ಉತ್ತರಕ್ಕೆ ಹಾಕಿ ಇಂಡಿಯಾ ಸಮಾಧಾನಗೊಂಡಿಲ್ಲ. ಗಾಯದ ಕಾರಣಕ್ಕೆ ವಿಶ್ರಾಂತಿಯಲ್ಲಿದ್ದ ಶ್ರೀಜೇಶ್‌ ಅನುಮತಿ ಇಲ್ಲದೆ ಭಾಗವಹಿಸಿರುವುದಕ್ಕೆ ಹಾಕಿ ಇಂಡಿಯಾ ತೀವ್ರ ಅಸಮಾಧಾನಗೊಂಡಿದೆ. ಸದ್ಯ ಹಾಕಿ ಇಂಡಿಯಾ ಶಿಸ್ತು ಸಮಿತಿ ಇವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next