Advertisement

ದುಬೈನ ಇಂಡಿಯನ್‌ ಸ್ಕೂಲ್‌ ಕ್ಯಾಂಪಸ್‌ ನಾಳೆಯಿಂದ ಕ್ಲೋಸ್‌

10:38 PM Mar 20, 2020 | sudhir |

ದುಬೈ: ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ದುಬೈನ ಇಂಡಿಯನ್‌ ಹೈ ಗ್ರೂಪ್‌ ಆಫ್ ಸ್ಕೂಲ್‌ ಗುರುವಾರದಿಂದ ಮುಚ್ಚಲಾಗುತ್ತಿದೆ. ಈ ಕುರಿತಂತೆ ಇಂದು ಶಾಲಾ ಆಡಳಿತ ಮಕ್ಕಳ ಪೋಷಕರಿಗೆ ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಮಾರ್ಚ್‌ 5ರ ಗುರುವಾರದಿಂದ ಐಎಚ್‌ಎಸ್‌ ಗ್ರೂಪ್‌ ಆಫ್ ಸ್ಕೂಲ್‌ಗ‌ಳನ್ನು ಮುಚ್ಚಲಾಗುತ್ತದೆ. ಪರೀಕ್ಷೆಗಳ ಕುರಿತಾದ ಮಾಹಿತಿಗಳನ್ನು ಮಂಬರುವ ದಿನಗಳಲ್ಲಿ ತಿಳಿಸಲಾಗುತ್ತದೆ.

Advertisement

ಕ್ಯಾಂಪಸ್‌ನ ವಿದ್ಯಾರ್ಥಿಯೋಬ್ಬನಿಗೆ ಕೊರೊನಾ ಸೋಂಕು ತಗುಲಿರುವ ಸಂಶಯ ಇದೆ. ಈ ಕುರಿತಂತೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಶಂಕಿತ ಕೊರೊನಾ ಪೀಡಿತ ವಿದ್ಯಾರ್ಥಿಯನ್ನು ತೀವ್ರ ನಿಗಾದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಶಂಕಿತ ಸೋಂಕು ಕಾಣಿಸಿಕೊಂಡ ಸಂದೇಶಗಳು ವಾಟ್ಸಾಪ್‌ನಲ್ಲಿ ಹರಿದಾಡಿದ ಬಳಿಕ ಅನೇಕ ಪೋಷಕರು ಭಯಭೀತರಾದರು.

ಶಾಲಾ ಕ್ಯಾಂಪಸ್‌ 3 ವಿಭಾಗಗಳನ್ನು ಒಳಗೊಂಡಿದೆ. ಜೂನಿಯರ್‌ ಕ್ಯಾಂಪಸ್‌, ಗಾರ್‌ಹೌಡ್‌ ಮತ್ತು ಇಂಟರ್‌ನ್ಯಾಶನಲ್‌ ಸ್ಕೂಲ್‌ ಕ್ಯಾಂಪಸ್‌ ಅನ್ನು ಒಳಗೊಂಡಿದೆ.

ಎರಡು ತಿಂಗಳ ಹಿಂದೆ ಚೀನದ ವುಹಾನ್‌ ನಗರದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಇದೀಗ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ವುಹಾನ್‌ ಪಟ್ಟಣದಲ್ಲಿ ಮಾತ್ರ ಸುಮಾರು 40 ಸಾವಿರಕ್ಕೂ ಅಧಿಕ ಜನರಲ್ಲಿ ಈ ವೈರಸ್‌ ಕಾಣಿಸಿಕೊಂಡಿದೆ. ಸಾವಿನ ಸಂಖ್ಯೆ ಚೀನವೊಂದರಲ್ಲೇ 3 ಸಾವಿರ ದಾಟಿದೆ.

ಜಗತ್ತಿನಾದ್ಯಂತ ಸುಮಾರು 3120ಕ್ಕೂ ಧಿಕ ಜನ ಮೃತಪಟ್ಟಿದ್ದಾರೆ. ಈ ವೈರಸ್‌ ಭೀತಿಗೆ ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ಪರಿಣಾಮ 4 ಮಿಲಿಯನ್‌ ಜನ ವಾಸಿಸುವ ವುಹಾನ್‌ ಪಟ್ಟಣ ಅಕ್ಷರಶಃ ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಚೀನ, ಭಾರತ ಸೇರಿದಂತೆ 70 ರಾಷ್ಟ್ರಗಳಿಗೆ ಕೊರೊನಾ ಹರಡಿದೆ. ಉಸಿರಾಟದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಈ ಮಾರಕ ವೈರಸ್‌ ಒಮ್ಮೆ ರಕ್ತದೊಂದಿಗೆ ಬೆರೆತರೆ ಜ್ವರ ವಿಪರೀತಕ್ಕೆ ಏರುತ್ತದೆ. ಕೇವಲ ಮೂರು ದಿನದಲ್ಲಿ ಸಾವನ್ನೂ ತರಬಹುದಾಗಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ನೀಫಾ ವೈರಸ್‌ ಸಾವಿರಾರು ಜನರ ಪ್ರಾಣವನ್ನು ಕಸಿದಿತ್ತು.

Advertisement

ಇದಕ್ಕೂ ಮುನ್ನ ಚೀನದಲ್ಲೇ ಕಾಣಿಸಿಕೊಂಡಿದ್ದ ಸಾರ್ಸ್‌ ವೈರಸ್‌ ಸಹ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಿತ್ತು. ಇವೆರಡ ಆಘಾತ ಮಾಸುವ ಮುನ್ನ ಕರೋನಾ ವೈರಸ್‌ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next