Advertisement

ಅಬುಧಾಬಿ ಮಾಸ್ಟರ್ ಜಿಎಂ ಅರ್ಜುನ್‌ಗೆ ಪ್ರಶಸ್ತಿ

10:06 PM Aug 25, 2022 | Team Udayavani |

ಅಬುಧಾಬಿ: ಭಾರತದ ಗ್ರ್ಯಾನ್‌ಮಾಸ್ಟರ್‌ ಅರ್ಜುನ್‌ ಎರಿಗೇಸಿ 28ನೇ “ಅಬುಧಾಬಿ ಮಾಸ್ಟರ್ ಚೆಸ್‌ ಟೂರ್ನಿ’ಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಸ್ಪೇನ್‌ನ ಡೇವಿಡ್‌ ಆ್ಯಂಟನ್‌ ಗ್ವಿಜಾರೊ ಅವರನ್ನು ಮಣಿಸುವ ಮೂಲಕ 18 ವರ್ಷದ ಅರ್ಜುನ್‌ ಪ್ರಶಸ್ತಿ ಸಂಭ್ರಮ ಆಚರಿಸಿದರು.

Advertisement

ಕೂಟದ 9 ಸುತ್ತುಗಳಲ್ಲೂ ಅಜೇಯರಾಗಿ ಉಳಿದದ್ದು ಅರ್ಜುನ್‌ ಎರಿಗೇಸಿ ಹೆಗ್ಗಳಿಕೆ. 9ನೇ ಹಾಗೂ ಅಂತಿಮ ಸುತ್ತಿನಲ್ಲಿ ಅವರು ಗ್ವಿಜಾರೊ ವಿರುದ್ಧ ಜಯ ಸಾಧಿಸಿ ಒಟ್ಟು ಅಂಕವನ್ನು 7.5ಕ್ಕೆ ಏರಿಸಿದರು. ಇದರಿಂದ ಉಜ್ಬೆಕಿಸ್ಥಾನದ ಜಾವೊಖೀರ್‌ ಸಿಂಡ್ರೋವ್‌ ಅವರಿಗಿಂತ ಅರ್ಧ ಅಂಕ ಹೆಚ್ಚು ಗಳಿಸಲು ಸಾಧ್ಯವಾಯಿತು. ಹಾಲೆಂಡ್‌ನ‌ ಜೋರ್ಡನ್‌ ವಾನ್‌ ಫಾರೀಸ್ಟ್‌ ತೃತೀಯ ಸ್ಥಾನಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next