Advertisement

ಬ್ಲೂವೇಲ್‌ ತಡೆಗೆ ಸರಕಾರದ ಗೇಮ್‌!

12:37 PM Sep 24, 2018 | Karthik A |

ಹೊಸದಿಲ್ಲಿ: ಮಾರಣಾಂತಿಕ ಬ್ಲೂವೇಲ್‌ ಹಾಗೂ ಮೋಮೋ ಚಾಲೆಂಜ್‌ ಅಪ್ಲಿಕೇಶನ್‌ಗಳಿಗೆ ಮಕ್ಕಳು ಮರುಳಾಗುತ್ತಿರುವುದನ್ನು ತಡೆಯಲು ಕೇಂದ್ರ ಸರಕಾರ ಮಕ್ಕಳಿಗಾಗಿ ಗೇಮ್‌ ಅಪ್ಲಿಕೇಶನ್‌ ಒಂದನ್ನು ಬಿಡುಗಡೆ ಮಾಡಿದೆ. ಇದನ್ನು ಸೈಬರ್‌ ಟ್ರಿವಿಯಾ ಎಂದು ಕರೆಯಲಾಗಿದ್ದು, ಬಹು ಆಯ್ಕೆ ಪ್ರಶ್ನೆ ಗಳನ್ನು ಇದು ಹೊಂದಿರುತ್ತದೆ. ಸರಿ ಉತ್ತರ ನೀಡಿದರೆ ಪಾಯಿಂಟ್‌ಗಳನ್ನು ನೀಡಲಾಗುತ್ತದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ ವಿವರಿಸಿದೆ.

Advertisement

ಮಕ್ಕಳು ಈಗ ಪಾಲಕರಿಗಿಂತ ಚುರುಕಾಗಿರುತ್ತಾರೆ. ಪಾಲಕರಿಗೆ ಗೊತ್ತಿಲ್ಲದಂತೆಯೇ ಇಂತಹ ಗೇಮ್‌ಗಳಿಗೆ ದಾಸರಾಗುತ್ತಾರೆ. ಪಾಲಕರ ಕಿವಿಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಮಕ್ಕಳು ಇರುವುದಿಲ್ಲ. ಹೀಗಾಗಿ ಇಂಥದ್ದೊಂದು ಗೇಮ್‌ ಅಭಿವೃದ್ಧಿಪಡಿಸಲು ನಿರ್ಧರಿಸಿದೆವು ಎಂದು ಎನ್‌ಸಿಪಿಸಿಆರ್‌ ಸದಸ್ಯ ಯಶವಂತ ಜೈನ್‌ ಹೇಳಿದ್ದಾರೆ. ಶೀಘ್ರದಲ್ಲೇ ಇದು ಆ್ಯಪ್‌ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ. ಇದನ್ನು ವರ್ತನೆ ಬದಲಾವಣೆ ತಂತ್ರವನ್ನು ಆಧರಿಸಿ ಅಭಿವೃದ್ಧಿಪಡಿಸಲಾಗಿದೆ. ಧನಾತ್ಮಕ ವರ್ತನೆಗೆ ಪ್ರೋತ್ಸಾಹ ನೀಡಿ, ಋಣಾತ್ಮಕ ವರ್ತನೆಯ ಬಗ್ಗೆ ನಿರುತ್ಸಾಹ ಮೂಡಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next