ಹೊಸದಿಲ್ಲಿ: ಕೇಂದ್ರ ಸರ್ಕಾರವು ಭಾರತದ ಭದ್ರತೆಗೆ ಅಪಾಯವನ್ನು ಉಂಟುಮಾಡುವ 54 ಚೀನೀ ಅಪ್ಲಿಕೇಶನ್ ಗಳನ್ನು ನಿಷೇಧಿಸಿದೆ ಮಾಡಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
2020 ಜೂನ್ ರಲ್ಲಿ, ಟಿಕ್ ಟಾಕ್, ಶೇರ್ ಇಟ್, ವಿಚಾಟ್, ಹೆಲೊ, ಲೈಕೀ, ಯುಸಿ ನ್ಯೂಸ್, ಬಿಗೋ ಲೈವ್, ಯುಸಿ ಬ್ರೌಸರ್, ಇಎಸ್ ಫೈಲ್ ಎಕ್ಸಪ್ಲೋರರ್ ಮತ್ತು ಎಂಐ ಸಮುದಾಯದಂತಹ ಜನಪ್ರಿಯ ಅಪ್ಲಿಕೇಶನ್ ಗಳು ಸೇರಿದಂತೆ ಸುಮಾರು 224 ಚೀನೀ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಸರ್ಕಾರವು ನಿಷೇಧ ಮಾಡಿತ್ತು.
ಇದೀಗ ಸ್ವೀಟ್ ಸೆಲ್ಫಿ ಎಚ್‌ಡಿ, ಬ್ಯೂಟಿ ಕ್ಯಾಮೆರಾ – ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಕ್ಯಾಮ್‌ಕಾರ್ಡ್ ಫಾರ್ ಸೇಲ್ಸ್‌ಫೋರ್ಸ್ ಎಂಟ್, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಕ್ರೈವರ್, ಒನ್ಮಿಯೋಜಿ ಚೆಸ್, ಆನ್‌ಮಿಯೊಜಿ ಮತ್ತು ಅರೆನಾ ಡ್ಯುಯಲ್ ಸ್ಪೇಸ್ ಲೈಟ್ ಸೇರಿ 54 ಆ್ಯಪ್ ಗಳನ್ನು ನಿಷೇಧ ಮಾಡಲಾಗಿದೆ.
ಇದನ್ನೂ ಓದಿ:ಹೇಗಿದೆ ನೋಡಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ
ಮೂಲಗಳ ಪ್ರಕಾರ, 54 ಅಪ್ಲಿಕೇಶನ್ ಗಳ ಪಟ್ಟಿಯಲ್ಲಿ ಭಾರತ ಸರ್ಕಾರದಿಂದ ಈ ಹಿಂದೆ ನಿಷೇಧಿಸಲ್ಪಟ್ಟ ಕೆಲವು ಆದರೆ ತಮ್ಮನ್ನು ಮರುಬ್ರಾಂಡ್ ಮಾಡಿ ಹೊಸ ಹೆಸರುಗಳಲ್ಲಿ ಮರುಪ್ರಾರಂಭಿಸಿರುವ ಆ್ಯಪ್ ಗಳೂ ಒಳಗೊಂಡಿದೆ. ಅಧಿಕೃತ ದೃಢೀಕರಣದ ನಂತರ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಮತ್ತೊಮ್ಮೆ ಆದೇಶ ನೀಡಲಾಗಿದೆ.
ಈ ಹಲವಾರು ಅಪ್ಲಿಕೇಶನ್‌ಗಳು ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ರನ್ ಮಾಡುತ್ತವೆ ಅಥವಾ ಬಳಕೆದಾರರ ಅನುಮತಿಯಿಲ್ಲದೆ ಚೀನಾ ಮೂಲದ ಡೇಟಾ ಕೇಂದ್ರಗಳಿಗೆ ಬಳಕೆದಾರರ ಮಾಹಿತಿಯನ್ನು ನೇರವಾಗಿ ಕಳುಹಿಸುತ್ತವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.