Advertisement

Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ

11:56 PM Dec 01, 2024 | Team Udayavani |

ಮಣಿಪಾಲ: ಉದಯವಾಣಿಯ ಮಣಿಪಾಲ ಆವೃತ್ತಿಯಲ್ಲಿ ಸಹಾಯಕ ಸುದ್ದಿ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ದಾಮೋದರ ಕಕ್ರಣ್ಣಾಯ (75) ಅವರು ಡಿ. 1ರಂದು ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನ ಹೊಂದಿದರು.

Advertisement

ಮೃತರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾ ರೆ.

35 ವರ್ಷಗಳ ವೃತ್ತಿ ಜೀವನ
ಮೂಲತಃ ದ.ಕ. ಜಿಲ್ಲೆಯ ಉಪ್ಪಿನಂಗಡಿ ಬಂದಾರು ಬರಮೇಲು ಗ್ರಾಮದ ನಿವಾಸಿಯಾಗಿದ್ದ ಅವರು ಹಲವು ವರ್ಷಗಳಿಂದ ಮಣಿಪಾಲದಲ್ಲಿ ವಾಸವಾಗಿದ್ದರು. ಸುಮಾರು 35 ವರ್ಷ ಉದಯವಾಣಿ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು. ಉಜಿರೆಯ ಎಸ್‌ಡಿಎಂನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು.

ಪದವಿಯಲ್ಲಿರುವಾಗ “ಉದಯವಾಣಿ’ಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಡಾ| ಎಸ್‌.ಎಲ್‌. ಭೈರಪ್ಪನವರ “ವಂಶವೃಕ್ಷ’ ಕಾದಂಬರಿಯ ಪಾತ್ರಗಳ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ “ಕಾತ್ಯಾಯಿನಿ’ ಪಾತ್ರದ ಬಗ್ಗೆ ಬರೆದ ದಾಮೋದರ ಕಕ್ರಣ್ಣಾಯ ಅವರು ಪ್ರಥಮ ಬಹುಮಾನ ಗಳಿಸಿದ್ದರು.

“ಉದಯವಾಣಿ’ಯ ಸಂಪಾದಕೀಯ ವಿಭಾಗದಲ್ಲಿ 1972ರಲ್ಲಿ ಉಪಸಂಪಾದಕರಾಗಿ ಸೇವೆಗೆ ಸೇರಿದ ಕಕ್ರಣ್ಣಾಯ ಅವರು ಬಳಿಕ ಮುಖ್ಯ ಉಪಸಂಪಾದಕರಾದರು. 2008ರಲ್ಲಿ ಸಹಾಯಕ ಸುದ್ದಿ ಸಂಪಾದಕರಾಗಿ ನಿವೃತ್ತಿ ಹೊಂದಿದರು.

Advertisement

ಪಿಟಿಐ, ಯುಎನ್‌ಐ ಸುದ್ದಿ ಸಂಸ್ಥೆಗಳ ಆಂಗ್ಲ ಸುದ್ದಿಗಳನ್ನು ಕನ್ನಡಕ್ಕೆ ಅನುವಾದಿಸುವ ಮತ್ತು ಪುಟ ವಿನ್ಯಾಸವನ್ನು ಮಾಡುವ ಕೆಲಸದಲ್ಲಿ ಸುದೀರ್ಘ‌ ಕಾಲ ತೊಡಗಿಸಿಕೊಂಡಿದ್ದರು. ಹಲವು ಲೇಖನಗಳನ್ನು ಬರೆದಿದ್ದರಲ್ಲದೆ, ಹೊಸ ಹೊಸ ಪ್ರಯೋಗಗಳನ್ನು ನಡೆಸಿದ್ದರು.

ಇದನ್ನೂ ಓದಿ: Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಭಾಗ.. ಓರ್ವ ಕಾರ್ಮಿಕ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next