Advertisement
ಇಂಡಿಗೊ ವಿಮಾನಗಳು ನವೆಂಬರ್‌ನಲ್ಲಿ 34.23 ಲಕ್ಷ ಪ್ರಯಾಣಿಕರನ್ನು ಹೊತ್ತೂಯ್ದಿದೆ. ಇದು ಒಟ್ಟು ದೇಶೀಯ ಮಾರುಕಟ್ಟೆಯ ಶೇ 53.9ರಷ್ಟು ಪಾಲನ್ನು ಹೊಂದುವ ಮೂಲಕ ಅಗ್ರ ಸಂಸ್ಥೆಯಾಗಿ ಮುಂದುವರಿದಿದೆ.
ನವೆಂಬರ್ ತಿಂಗಳಿನಲ್ಲಿ ಇಂಡಿಗೊ ಬೆಂಗಳೂರು, ದಿಲ್ಲಿ, ಹೈದರಾಬಾದ್ ಮತ್ತು ಮುಂಬಯಿ ವಿಮಾನ ನಿಲ್ದಾಣಗಳಲ್ಲಿ ಶೇ. 97.5ರಷ್ಟು ಕಾರ್ಯಕ್ಷಮತೆಯನ್ನು ದಾಖಲಿಸಿದೆ. ನವೆಂಬರ್‌ನಲ್ಲಿ ಈ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಏರ್ ಏಷ್ಯಾ ಶೇ. 95.6, ವಿಸ್ತಾರ ಶೇ. 94.8ರಷ್ಟು ಕಾರ್ಯಕ್ಷಮತೆಯೊಂದಿಗೆ ಬಳಿಕದ ಸ್ಥಾನದಲ್ಲಿದೆ.
Related Articles
ಪ್ರಮುಖ ನಿಗದಿತ ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಪ್ರಯಾ ಣಿಕರ ಲೋಡ್ ಫ್ಯಾಕ್ಟರ್ (ಪಿಎಲ…ಎಫ್) ನವೆಂಬರ್‌ನಲ್ಲಿ ಶೇ. 66- 77ರಷ್ಟಿತ್ತು. ಅಕ್ಟೋಬರ್‌ನಲ್ಲಿ ಶೇ. 61-74ರಷ್ಟಿತ್ತು. ಆದರೆ ವರ್ಷದ ಹಿಂದಿನ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳು ಶೇ. 77-92ರಷ್ಟು ಪಿಎಲ…ಎಫ್ ದಾಖಲಿಸಿದ್ದವು. ಈ ಪಿಎಲ್‌ಎಫ್ ಅಥವಾ ಲೋಡ್ ಫ್ಯಾಕ್ಟರ್ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಸಾರಿಗೆ ಸೇವೆಗಳ ಸಾಮರ್ಥ್ಯದ ಬಳಕೆಯನ್ನು ಅಳೆಯುತ್ತದೆ.
Advertisement
ಏನು ಕಾರಣ?ಲಾಕ್‌ಡೌನ್ ಸಡಿಲಿಕೆ ಮತ್ತು ಹಬ್ಬದ ಋತು ಪ್ರಾರಂಭ ಗೊಂಡ ಬಳಿಕ ದೇಶದಲ್ಲಿ ವಿಮಾನ ಯಾನಕ್ಕೆ ಬೇಡಿಕೆ ಕುದುರತೊಡಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ತಡೆಹಿಡಿಯಲಾದ ವಿಮಾನ ಹಾರಾಟವನ್ನು ಎರಡು ತಿಂಗಳ ಬಳಿಕ ಅಂದರೆ ಮೇ 25ರಂದು ದೇಶೀಯ ಪ್ರಯಾಣಿಕರ ಹಾರಾ ಟಕ್ಕೆ ಪುನರಾರಂಭಿ ಸಲಾಗಿತ್ತು. ನವೆಂಬರ್‌ನಲ್ಲಿ ದೇಶೀಯ ವಿಮಾನಗಳಲ್ಲಿ ಶೇ. 70 ಸಾಮರ್ಥ್ಯದೊಂದಿಗೆ ವಿಮಾನ ಹಾರಾಟ ಮಾಡಲು ಅವಕಾಶ ಕಲ್ಪಿಸಿದ್ದು, ಬಳಿಕ ಇದನ್ನು ಡಿಸೆಂಬರ್ ಆರಂಭದಲ್ಲಿ ಶೇ.80ಕ್ಕೆ ಏರಿಸಲಾಯಿತು. ಇದರಿಂದಾಗಿ ವಿಮಾನ ಯಾನಿಗಳ ಸಂಖ್ಯೆ ಹೆಚ್ಚಿದೆ.