Advertisement
ತೆಗೆಯುವ ಫೋಟೋ ಹಿಂದೆ ಅದೆಷ್ಟೋ ಪರಿಶ್ರಮ ಅಡಕವಾಗಿರುತ್ತದೆ.
Related Articles
ಲಿಂಗ ತಾರತಮ್ಯ, ಸಂಪ್ರದಾಯಿಕ ಕಟ್ಟುಪಾಡುಗಳೊಂದಿಗೆ ವಿಶ್ವವನ್ನೇ ನಿಬ್ಬೆರಗಾಗಿಸುವ ಜಾಗತಿಕ ಯುದ್ಧ, ಸ್ವಾತಂತ್ರ್ಯ ಸಂಗ್ರಾಮ ಈಕೆ ಛಯಾಗ್ರಾಹಕಿಯಾಗಲು ಒಂದು ಸವಾಲೇ ಆಗಿತ್ತು. 1930ರಲ್ಲಿ ತಮ್ಮ ಛಾಯಾಗ್ರಹಣ ವೃತ್ತಿ ಆರಂಭಿಸಿದ ಇವರು ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಛಾಯಚಿತ್ರ ಸಂಗ್ರಹಿಸಿದ್ದು ಇಂದಿಗೂ ಅವು ಚಳುವಳಿಯ ಸಾಕ್ಷ್ಯರೂಪಕಗಳಾಗಿವೆ.
Advertisement
ಬರೀ ಹೋರಾಟ ಮಾತ್ರವಲ್ಲದೆ ಕಣಿವೆ, ಪರಿಸರ ಛಾಯಚಿತ್ರಗಳನ್ನೂ ಇವರು ಹೆಚ್ಚಾಗಿ ಇಷ್ಟಪಡುತ್ತಿದ್ದರಂತೆ. ಕೆಮರಾ ತಲೆಬುಡ ಗೊತ್ತಿಲ್ಲದಿದ್ದ ಅಂದಿನ ಜನಸಾಮಾನ್ಯರ ನಡುವೆ 2ನೇ ಜಾಗತಿಕ ಯುದ್ಧದ ಕಾಲದಲ್ಲಿ ವಾರಪತ್ರಿಕೆ ಎನಿಸಿದ “ದಿ ಲಸ್ಟರೆಟೆಡ್ ವಿಕ್ಲಿ ಆಫ್ ಇಂಡಿಯಾ’ ದಲ್ಲಿ ಅಧಿಕೃತವಾಗಿ ಕೆಲಸ ಆರಂಭಿಸಿದರು.
ಸ್ವಾತಂತ್ರ್ಯ ಸಂಗ್ರಾಮದ ಕಾಲಾವಧಿಯಲ್ಲಿ ಮಹಾತ್ಮ ಗಾಂಧೀಜಿ, ನೆಹರೂ ಮುಂತಾದ ರಾಷ್ಟ್ರ ನಾಯಕರೊಂದಿಗೆ ಒಡನಾಟಹೊಂದಿದ್ದು ಆ ಕಾಲಾವಧಿಯ ಚಿತ್ರ ಸಂಗ್ರಹದಲ್ಲಿ ಪ್ರಮುಖ ಸ್ಥಾನ ಹೊಂದಿದ್ದಾರೆ. ಬಳಿಕ “ಲೈಫ್’ ಎಂಬ ನಿಯತಕಾಲಿಕೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದು ಬ್ರಿಟೀಷ್ ಮಾಹಿತಿ ಕಾರ್ಯಾಗಾರದಲ್ಲೂ (ಇನ್ಫಾರ್ಮೇಷನ್ ಸರ್ವಿಸಸ್) ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಗೆ 2010ರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ “ಜೀವಮಾನ ಸಾಧನೆ ಪ್ರಶಸ್ತಿ’ ಲಭಿಸಿದೆ.
ಇವರ ಛಾಯಾಗ್ರಹಣದ ಮತ್ತೂಂದು ವಿಶೇಷತೆಯೆಂದರೆ ಸಂಗ್ರಹಿಸಿದ ಛಾಯಾಚಿತ್ರವೆಲ್ಲವೂ “ದಲದ್13′ ಎಂಬ ನಾಮಾಂಕಿತದಲ್ಲಿ ಪ್ರಕಟಿಸಲಾಗುತ್ತಿತ್ತು. ಆಕೆ ಜನಿಸಿದ್ದು, ಪತಿಯನ್ನು ಭೇಟಿ ಮಾಡಿದ್ದು, ಕಾರಿನ ಸಂಖ್ಯೆ ಎಲ್ಲವೂ 13 ಆಗಿದ್ದು ಇದನ್ನೇ ಅದೃಷ್ಟ ಸಂಖೆಯಾಗಿ ಆಯ್ಕೆ ಮಾಡಿರುವುದನ್ನು ಕಾಣಬಹುದು. ಹಿಂದಿನ ಕಾಲದಲ್ಲಿ ಫೋಟೋ ಜರ್ನಲಿಸ್ಟ್‌ಗೂ ಸಹ ಡ್ರೆಸ್‌ಕೊಡ್, ಕೆಲವು ಶಿಸ್ತುಬದ್ಧ ನಿಯಮಗಳಿದ್ದವಂತೆ. ಬದಲಾದ ಕಾಲಘಟ್ಟಕ್ಕೆ ಫೋಟೋಗ್ರಫಿಯ ಒಂದು ಲಾಭದಾಯಕ ಹುದ್ದೆಯಾಗಿ ಪರಿವರ್ತಿಸುವ ವರ್ಗವನ್ನು ಕಂಡು ಬೆಸತ್ತು ಮತ್ತು ಪತಿ ಮನೇಕ್‌ಶಾ ಜಮ್‌ಸೇಟ್‌ಜಿ ಅವರು 1969ರಲ್ಲಿ ನಿಧನ ಹೊಂದಿದರು. ಪತಿ ಅಗಲಿಕೆಯ ನೋವು ಅವರನ್ನು ವೃತ್ತಿಜೀವನಕ್ಕೆ (1973) ವಿದಾಯ ಹೇಳುವಂತೆ ಮಾಡಿತು. ರವಿ ಕಾಣದ್ದನ್ನು ಕವಿ ಕಂಡಂತೆ ನಮ್ಮಲ್ಲಿರುವ ಅದೆಷ್ಟೊ ನೆನಪುಗಳನ್ನು ಮೆಲುಕಿಸುವ ಫೋಟೋ ಎಂದೆದಿಗೂ ಜೀವಂತವೆನ್ನಬಹುದು. 2013ರಲ್ಲಿ ಇವರು ಮರಣಹೊಂದಿದರೂ ಇವರ ಚಿತ್ರಸಂಗ್ರಹಗಳು ಮುಂಬಯಿಯ ನ್ಯಾಷನಲ್ ಗ್ಯಾಲರಿಯಲ್ಲಿ ಇಂದಿಗೂ ಅವರ ಜೀವಂತಿಕೆಯನ್ನು ಪ್ರಸ್ತುತ ಪಡಿಸುತ್ತಲೇ ಇವೆ. ರಾಧಿಕಾ, ಕುಂದಾಪುರ