Advertisement

IAF ವಾಯು ದಾಳಿ: ಲತಾ, ಅಕ್ಷಯ್‌, ಸಲ್ಮಾನ್‌, ಬಾಲಿವುಡ್‌ ಪ್ರಶಂಸೆ

10:29 AM Feb 26, 2019 | udayavani editorial |

ಮುಂಬಯಿ : ಲತಾ ಮಂಗೇಶ್ಕರ್‌, ಸಲ್ಮಾನ್‌ ಖಾನ್‌ ಮತ್ತು ಅಕ್ಷಯ್‌ ಕುಮಾರ್‌ ಸೇರಿದಂತೆ ಬಾಲಿವುಡ್‌ನ‌ ಹೆಚ್ಚಿನೆಲ್ಲ  ನಟ ನಟಿಯರು, ಕಲಾವಿದರು ಭಾರತೀಯ ವಾಯು ಪಡೆ ಇಂದು ಪಾಕಿಸ್ಥಾನದಲ್ಲಿನ ಉಗ್ರರ ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿರವುದನ್ನು ಸ್ವಾಗತಿಸಿ ಪ್ರಶಂಸಿಸಿದ್ದಾರೆ.

Advertisement

ಬಾಲಿವುಡ್‌ ಖ್ಯಾತರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. 

“ನಾನಿವತ್ತು ಬೆಳಗ್ಗಿನಿಂದಲೇ ಟಿವಿ ನೋಡುತ್ತಿದ್ದೇನೆ; ನಮ್ಮ ಸೇನಾ ಪಡೆ ಇಷ್ಟೊಂದು ಸನ್ನದ್ಧತೆ ಮತ್ತು ಶಕ್ತಿಯೊಂದಿಗೆ ದಾಳಿ ನಡೆಸಿರುವುದನ್ನು ಕಂಡು ಸಂತಸವಾಗಿದೆ; ನಾನು ಯಾವತ್ತೂ ಹೇಳಿಕೊಂಡು ಬಂದಿದ್ದೇನೆ : ಭಾರತ ಇವತ್ತು ಇರುವುದೇ ನಮ್ಮ ಸದೃಢ ಸೇನೆಯಿಂದಾಗಿ. ನಾವು ಈ ಹೆಮ್ಮೆಯ ದೇಶದಲ್ಲಿ ವಾಸಿಸಿಕೊಂಡಿರುವುದು ನಮ್ಮೆಲ್ಲರ ಅದೃಷ್ಟ’ ಎಂದು ಲತಾ ಮಂಗೇಶ್ಕರ್‌ ಅವರು ಸುದ್ದಿ ವಾಹಿನಿ ಜತೆ ಮಾತನಾಡುತ್ತಾ ಹೇಳಿದರು.

ಭಾರತೀಯ ವಾಯು ಪಡೆ ಪಾಕ್‌ ಒಳಗೆ ನುಗ್ಗಿ ಉಗ್ರರ ಶಿಬಿರಗಳನ್ನು ನಾಶಪಡಿಸಿದೆ; ನಮ್ಮ ಐಎಎಫ್ ಬಗ್ಗೆ  ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಅಕ್ಷಯ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next