Advertisement

ಜೈನ ಬಸದಿಗೆ ಚುನಾವಣಾ ಆಯೋಗದ ಕಮಿಷನರ್‌ ಭೇಟಿ

09:51 AM Jan 06, 2020 | Hari Prasad |

ಮೂಡುಬಿದಿರೆ: ಭಾರತದ ಚುನಾವಣಾ ಆಯೋಗದ ಕಮೀಷನರ್‌ ಅಶೋಕ್‌ ಲಾವಸ ದಂಪತಿ ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಶನಿವಾರ ಭೇಟಿ ನೀಡಿದರು.
ಭಟ್ಟಾರಕ ಸ್ವಾಮೀಜಿ ಅವರು ಅಶೋಕ್‌ ಲಾವಸ ದಂಪತಿಗೆ ಬಸದಿಯ ಶಿಲ್ಪಕಲೆ ಮತ್ತು ಇತರ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು. ಬಸದಿಯ ವಾಸ್ತುಶಿಲ್ಪ ವಿಶೇಷ, ಶಿಲ್ಪಕಲಾ ಕೌಶಲದ ಬಗ್ಗೆ ಅಶೋಕ್‌ ಲಾವಸ ಆಸಕ್ತಿ ತೋರಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಜೈನ ಮಠದಲ್ಲಿ ಅಶೋಕ್‌ ಲಾವಸ ದಂಪತಿಯನ್ನು »ಟ್ಟಾರಕ ಸ್ವಾಮೀಜಿಯವರು ಸಮ್ಮಾನಿಸಿ, ಹರಸಿದರು.

Advertisement

ಮಾಜಿ ಸಚಿವ ಕೆ.ಅಭಯಚಂದ್ರ , ಮೂಡುಬಿದಿರೆ ತಹಶೀಲ್ದಾರ್‌ ಅನಿತಾಲಕ್ಷ್ಮೀ, ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್‌ ಕುಮಾರ್‌, ಬಿ. ದಿನೇಶ್‌ಕುಮಾರ್‌ ಆನಡ್ಕ, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್‌, ಮಠದ ವ್ಯವಸ್ಥಾಪಕ ಸಂಜಯಂತ್‌ ಕುಮಾರ್‌ ಶೆಟ್ಟಿ ಮೊದಲಾದರವರು ಉಪಸ್ಥಿತರಿದ್ದರು.

ಮೂಡುಬಿದಿರೆ ಜೈನಮಠದಲ್ಲಿ ಭಟ್ಟಾರಕ ಸ್ವಾಮೀಜಿಯವರು ಅಶೋಕ್‌ ಲಾವಸ ದಂಪತಿಯನ್ನು ಸನ್ಮಾನಿಸಿ ಹರಸಿದರು.

Advertisement

Udayavani is now on Telegram. Click here to join our channel and stay updated with the latest news.

Next