Advertisement

AI News: ಆಪೆನ್‌ಹೈಮರ್‌ಗೆ ಭಾರತೀಯ ಉಡುಗೆ

10:00 PM Aug 02, 2023 | Team Udayavani |

ಇತ್ತೀಚಗೆ ಬಿಡುಗಡೆಯಾದ “ಆಪೆನ್‌ಹೈಮರ್‌’ ಚಿತ್ರವು ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ಇದೇ ವೇಳೆ, ಸಿನಿಮಾದ ನಾಯಕ, ನಾಯಕಿ ಸೇರಿದಂತೆ ಪ್ರಮುಖ ಕಲಾವಿದರಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ತೊಡಿಸಲಾಗಿದೆ. ನೃತ್ಯದ ದೃಶ್ಯದಲ್ಲಿ ಸಿಲಿಯನ್‌ ಮರ್ಫಿ, ರಾಬರ್‌ ಡೌನಿ ಜೂನಿಯರ್‌, ಫ್ಲಾರೆನ್ಸ್‌ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಧುವಿನಂತೆ ಕೆಂಪು ಲೆಹೆಂಗಾದಲ್ಲಿ ಎಮಿಲಿ ಬ್ಲಿಂಟ್‌ ಮಿಂಚುತ್ತಿದ್ದಾರೆ. ಈ ಎಐ ಚಿತ್ರಗಳನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ “ಎಐ ಆರ್ಟ್‌’ ಖಾತೆಯು ಹಂಚಿಕೊಂಡಿದೆ. ಈ ಚಿತ್ರಗಳಿಗೆ ಭಾರೀ ಮೆಚ್ಚುಗೆ ಸಿಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next