Advertisement

ಇಂಡಿಯನ್‌ಮನಿ ಡಾಟ್‌ ಕಾಮ್‌ ಸಪೋರ್ಟ್‌ ಸೆಂಟರ್‌ ನಾಳೆ ಶುರು

01:22 PM Dec 09, 2017 | Team Udayavani |

ಹುಬ್ಬಳ್ಳಿ: ಇಂಡಿಯನ್‌ಮನಿ ಡಾಟ್‌ ಕಾಂ 14ನೇ ಸಪೋರ್ಟ್‌ ಸೆಂಟರ್‌ ಉದ್ಘಾಟನೆ ಡಿ. 10ರಂದು ಸಂಜೆ 4ಕ್ಕೆ ವಿದ್ಯಾನಗರದ ಎಸ್‌ಕೆಡಿ ಹೈಟ್ಸ್‌  ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಇಂಡಿಯನ್‌ಮನಿ ಡಾಟ್‌ ಕಾಮ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್‌. ಸುಧೀರ  ಮಾತನಾಡಿದರು.

Advertisement

ವಿಧಾನಸಭೆ ಪ್ರತಿ ಪಕ್ಷದ ನಾಯಕ ಜಗದೀಶ ಶೆಟ್ಟರ ಉದ್ಘಾಟನೆ ನೆರವೇರಿಸಲಿದ್ದು, ಸಂಸದ ಪ್ರಹ್ಲಾದ ಜೋಶಿ ಆಗಮಿಸುವರು. ಮಹಾಪೌರ  ಡಿ.ಕೆ. ಚವ್ಹಾಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ನಮ್ಮ ಸಂಸ್ಥೆ ಜೀವ ವಿಮೆ, ಆರೋಗ್ಯ ವಿಮೆ, ಮ್ಯುಚ್ಯುಯೆಲ್‌ ಫ‌ಂಡ್‌, ಸಾಲ, ರಿಯಲ್‌ ಎಸ್ಟೇಟ್‌  ರಾಟ  ಕುರಿತು ಮಾರ್ಗದರ್ಶನ ನೀಡಲಿದೆ.

ಆಸಕ್ತರು ಹೆಲ್ಪ್ಲೈನ್‌ 022 6181 6111 ಮಿಸ್‌ಕಾಲ್‌ ನೀಡಿದರೆ ಅವರಿಗೆ ಫೋನ್‌ ಮಾಡಿ ಬೇಡಿಕೆಗೆ ಅನುಗುಣವಾಗಿ  ಮಾರ್ಗದರ್ಶನ ನೀಡಲಾಗುವುದು. ಅಲ್ಲದೇ ಸಂಸ್ಥೆ ಮುದ್ರಣ ಮಾಧ್ಯಮ, ಇನ್ಫೊ-ಗ್ರಾμಕ್ಸ್‌, ವಿಡಿಯೋಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮಾರ್ಗದರ್ಶನ ನೀಡುತ್ತಿದೆ ಎಂದು ವಿವರಿಸಿದರು. 

ಹುಬ್ಬಳ್ಳಿ ಸಪೋರ್ಟ್‌ ಸೆಂಟರ್‌ಗಾಗಿ 250 ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು,  ಇನ್ನೊಂದು ವರ್ಷದಲ್ಲಿ ಇಲ್ಲಿ ಸುಮಾರು 1000 ಜನರಿಗೆ ಉದ್ಯೋಗ ನೀಡುವ ಇಚ್ಛೆಯಿದೆ. 2008ರಲ್ಲಿ ಬೆಂಗಳೂರಿನಲ್ಲಿ ಇಂಡಿಯನ್‌ಮನಿ ಡಾಟ್‌ ಕಾಮ್‌  ಸಂಸ್ಥೆ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಅವರಿಂದ ಉದ್ಘಾಟನೆಗೊಂಡಿದೆ ಎಂದರು. 

ಕೆವಿಜಿ ಬ್ಯಾಂಕ್‌ ಜನ್‌ಧನ್‌ ಖಾತೆದಾರರಿಗೆ ಹಣಕಾಸು ಸಾಕ್ಷರತೆ ಮೂಡಿಸಲು ಕೇಂದ್ರ ಹಣಕಾಸು ಸಚಿವಾಲಯ ಇಂಡಿಯನ್‌ಮನಿ ಡಾಟ್‌ ಕಾಮ್‌ನ ವೇದಿಕೆ ಬಳಸಿಕೊಂಡಿದೆ. ಇದೇ ಅ. 19 ಹಾಗೂ  20ರಂದು ನಡೆದ ವಿಶ್ವ ಬ್ಯಾಂಕ್‌ನ μನ್‌ ಟೆಕ್‌ ಸಿಇಒ

Advertisement

-ಶೃಂಗಸಭೆಯಲ್ಲಿ ಸಿ.ಎಸ್‌. ಸುಧೀರ ಭಾರತವನ್ನು ಪ್ರತಿನಿಧಿಸಿದ್ದಾರೆ ಎಂದರು. ಕರ್ನಾಟಕದ  ಪೊಲೀಸ್‌ ಸಿಬ್ಬಂದಿಗಾಗಿಯೇ ಸಂಸ್ಥೆ ಪ್ರತ್ಯೇಕ ಹೆಲ್ಪ್ಲೈನ್‌ ಆರಂಭಿಸಿದ್ದು, ಇತರ ಸರಕಾರಿ ಇಲಾಖೆಗಳಿಗೂ ಸೇವೆ ವಿಸ್ತರಿಸುವ ಯೋಜನೆಯಿದೆ ಎಂದು  ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next