Advertisement

Khalistan; ಕೆನಡಾದೊಂದಿಗೆ ಸಂಬಂಧಗಳಿಗೆ ಹೊಡೆತ ಬೀಳಲಿದೆ: ಜೈಶಂಕರ್ ಎಚ್ಚರಿಕೆ

10:38 PM Jul 03, 2023 | Team Udayavani |

ಹೊಸದಿಲ್ಲಿ: ಖಲಿಸ್ತಾನಿ ಅಂಶಗಳಿಗೆ ಜಾಗ ನೀಡದಂತೆ ಕೆನಡಾಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಕೆನಡಾದಲ್ಲಿ ಖಲಿಸ್ತಾನಿ ಬೆದರಿಕೆ ಪೋಸ್ಟರ್‌ಗಳು ಭಾರತೀಯ ರಾಜತಾಂತ್ರಿಕರ ಹೆಸರನ್ನು ಒಳಗೊಂಡಿರುವುದು ಬೆಳಕಿಗೆ ಬಂದ ನಂತರ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.

Advertisement

ಬಿಜೆಪಿ ಪ್ರಚಾರ ಅಭಿಯಾನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜೈಶಂಕರ್, ಖಲಿಸ್ತಾನಿ ಪೋಸ್ಟರ್‌ಗಳಲ್ಲಿನ ಭಾರತೀಯ ರಾಜತಾಂತ್ರಿಕರ ಚಿತ್ರಗಳ ವಿಷಯವನ್ನು ಕೆನಡಾದ ಅಧಿಕಾರಿಗಳೊಂದಿಗೆ ಭಾರತ ಪ್ರಸ್ತಾಪಿಸಿದೆ ಎಂದು ಜೈಶಂಕರ್ ಹೇಳಿದ್ದಾರೆ. ಭಾರತ ಸರ್ಕಾರವು ಕೆನಡಾ ಮತ್ತು ಯುಕೆ ನಂತಹ ಪಾಲುದಾರ ರಾಷ್ಟ್ರಗಳನ್ನು ತಲುಪಿದೆ. ಖಲಿಸ್ತಾನಿ ಗುಂಪುಗಳಿಗೆ ಜಾಗ ನೀಡದಂತೆ ವಿನಂತಿಸಿದ್ದೇವೆ, ಇದು ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿರುವುದಾಗಿ ಹೇಳಿದರು.

“ಕೆನಡಾ, ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾದಂತಹ ನಮ್ಮ ಪಾಲುದಾರ ರಾಷ್ಟ್ರಗಳಿಗೆ ನಾವು ವಿನಂತಿಸಿದ್ದೇವೆ, ಅಲ್ಲಿ ಕೆಲವೊಮ್ಮೆ ಖಲಿಸ್ತಾನಿ ಚಟುವಟಿಕೆಗಳು ನಡೆಯುತ್ತವೆ, ಖಲಿಸ್ತಾನಿಗಳಿಗೆ ಜಾಗ ನೀಡಬೇಡಿ. ಏಕೆಂದರೆ ಖಲಿಸ್ತಾನಿಗಳು ತೀವ್ರಗಾಮಿ, ಉಗ್ರಗಾಮಿ ಚಿಂತನೆ ನಮಗಾಗಲೀ ಅವರಿಗಾಗಲೀ ಸಂಬಂಧಗಳಿಗೆ ಒಳ್ಳೆಯದಲ್ಲ” ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದರು.

ಕೆನಡಾದಲ್ಲಿ ಭಾರತೀಯ ರಾಯಭಾರಿ, ಹೈಕಮಿಷನರ್ ಸಂಜಯ್ ವರ್ಮಾ ಮತ್ತು ಟೊರೊಂಟೊದಲ್ಲಿರುವ ಭಾರತದ ಕಾನ್ಸುಲ್ ಜನರಲ್ ಅಪೂರ್ವ ಶ್ರೀವಾಸ್ತವ ಅವರ ಚಿತ್ರಗಳು ಮತ್ತು ಹೆಸರುಗಳನ್ನು ಹೊಂದಿರುವ ಖಲಿಸ್ತಾನ್ ಪರ ಪೋಸ್ಟರ್ ಕೆನಡಾದಲ್ಲಿ ಹೊರಬಿದ್ದಿದ್ದು, ಖಲಿಸ್ತಾನಿ ಹರ್ದೀಪ್ ನಿಜ್ಜಾರ್ ಹತ್ಯೆಗೆ ಭಾರತವೇ ಕಾರಣ ಎಂದು ಹೇಳಿಕೊಂಡಿತ್ತು. ಭಾರತದಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ನಿಜ್ಜರ್ ನನ್ನು ಜೂನ್ 18 ರಂದು ಕೆನಡಾದ ಸರ್ರೆಯಲ್ಲಿರುವ ಗುರುನಾನಕ್ ಗುರುದ್ವಾರ ಸಾಹಿಬ್‌ನ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಖಲಿಸ್ತಾನಿಗಳು ಹತ್ಯೆಗೆ ಭಾರತವನ್ನು ದೂಷಿಸಲು ಪ್ರಾರಂಭಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next