Advertisement

ಭಾರತೀಯ ಸಂಸ್ಕೃತಿ ವಿಶ್ವಕ್ಕೇ ಬೆಳಕು ನೀಡುತ್ತದೆ

12:50 AM Jan 24, 2019 | Team Udayavani |

ಕುಂಬಳೆ: ಭಾರತೀಯ ಸಂಸ್ಕೃತಿ ಇಡೀ ವಿಶ್ವಕ್ಕೆ ಬೆಳಕು ನೀಡುವ ಸಂಸ್ಕೃತಿ. ಇಂತಹ ಸಂಸ್ಕೃತಿಯನ್ನು ಮರೆತಲ್ಲಿ ಇಡೀ ವಿಶ್ವವೇ ಸರ್ವನಾಶಗೊಳ್ಳಲಿದೆ. ಆದುದರಿಂದ ನಮ್ಮ ಸಂಸ್ಕೃತಿಯನ್ನು ಪೋಷಿಸಿ ಸಂರಕ್ಷಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಮೊಕ್ತೇಸರ ವೇ|ಮೂ| ಅನಂತ ಪಧ¾ನಾಭ ಆಸ್ರಣ್ಣ ನುಡಿದರು.

Advertisement

ಬೆಜ್ಜ ಶ್ರೀ ಧೂಮಾವತೀ ಬಂಟ ದೆ„ವಗಳ ಕ್ಷೇತ್ರದ ಭಂಡಾರ ಮನೆಯ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಸಮಾರೋಪ ಸಮಾರಂಭದ ಧಾರ್ಮಿಕ ಸಭೆಯಲ್ಲಿ   ದೀಪ ಬೆಳಗಿಸಿ ಅಶೀರ್ವಚನ ನೀಡಿ ಪೂಜ್ಯರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು  ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ ಬೆಜ್ಜದ ಗುತ್ತು ವಹಿಸಿದರು. ವೇದಿಕೆಯಲ್ಲಿ ಮಂಚಿ ಧರ್ಮ ಜಾಗರಣಾ ಪ್ರತಿಷ್ಠಾನದ ಅಧ್ಯಕ್ಷ ಕೊಯ್ಯೂರು ನಾರಾಯಣ ಭಟ್‌, ಧಾರ್ಮಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಉಪಸ್ಥಿತರಿದ್ದರು.

ಲತಾ ಪ್ರಾರ್ಥನೆ ಹಾಡಿದರು. ಜಯರಾಮ ಶೆಟ್ಟಿ ಬೆಜ್ಜದ ಗುತ್ತು ಸ್ವಾಗತಿಸಿದರು. ಹೇಮ ಚಂದ್ರ ಕೈರಂಗಳ ನಿರೂಪಿಸಿದರು. ಕೃಷ್ಣ ಕೊಳಂಜ ವಂದಿಸಿದರು.

ಸಮಾರಂಭದಲ್ಲಿ ಭಂಡಾರ ಮನೆ ನಿರ್ಮಾಣದ ಕಾಷ್ಠ ಶಿಲ್ಪಿ ಬಾಬು ರಾಜ ಆಚಾರ್ಯ ಕಡಂಬಾರು ಹಾಗೂ ಕಲ್ಲಿನ ಕೆಲಸದ ಮೇಸ್ತ್ರಿ ಬಾಲಕೃಷ್ಣ ಶೆಟ್ಟಿ ಕಡಂಬಾರು ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. 
ಬಳಿಕ ಸ್ಥಳೀಯ ಮಕ್ಕಳಿಂದ ನƒತ್ಯ ಪ್ರದರ್ಶನ, ತಾಂಬೂಲ ಕಲಾವಿದೆರ್‌ ಪುಂಜಾಲಕಟ್ಟೆ ಇವರಿಂದ ಅರ್ಗಂಟ್‌ ನಾಟಕ ನಡೆಯಿತು. ಗಣಪತಿ ಹೋಮ, ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ದುರ್ಗಾ ಹೋಮ, ದೆ„ವಗಳ ತಂಬಿಲ, ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಚೌಕಿ ಪೂಜೆ ಅನ್ನಸಂತರ್ಪಣೆ, ಬಪ್ಪನಾಡು ಮೇಳದವರಿಂದ “ಬಾಲೆ ಭಗವಂತನ’ ಎಂಬ ಯಕ್ಷಗಾನ ಬಯಲಾಟ ಜರಗಿತು.

Advertisement

ಧರ್ಮಕ್ಕೇ ಗೆಲುವು
 ಹಿಂದೂಗಳ ಎಲ್ಲ ಕೇಂದ್ರಗಳು ಸಂಸ್ಕಾರ ಕೇಂದ್ರವಾಗಿದೆ. ನಾವು ಅನ್ಯಾಯ, ಅಧರ್ಮದಲ್ಲಿ ಪ್ರಾರಂಭದಲ್ಲಿ   ಗೆಲುವನ್ನು ಸಾಧಿಸಿದರೂ ಕೊನೆಯಲ್ಲಿ ಧರ್ಮಕ್ಕೆ ಮಾತ್ರ ಗೆಲುವು ಖಚಿತ ಎಂಬುವುದನ್ನು ನಮ್ಮ ಪುರಾಣ ಇತಿಹಾಸ ಸಾರಿ ಹೇಳುತ್ತಿದೆ ಎಂದು ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next