Advertisement

ಬೆಟ್ಟಿಂಗ್‌ನಲ್ಲಿ ಭಾರತ ಕ್ರಿಕೆಟಿಗ?

06:00 AM Apr 07, 2018 | Team Udayavani |

ಜೈಪುರ: 2011ರ ವಿಶ್ವಕಪ್‌ ಕ್ರಿಕೆಟ್‌ ವಿಜೇತ ಭಾರತ ತಂಡದ ಸದಸ್ಯನೊಬ್ಬ ಬೆಟ್ಟಿಂಗ್‌ ತಂಡದೊಂದಿಗೆ ಸಂಬಂಧ ಹೊಂದಿದ್ದಾರೆಂಬ
ಬಲವಾದ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದ ಟಿ20 ಲೀಗ್‌ನಲ್ಲಿ ಭಾರೀ ಬೆಟ್ಟಿಂಗ್‌ ನಡೆದಿತ್ತು.
ಆ ಕೂಟದ ಹಿಂದಿದ್ದ ವ್ಯಕ್ತಿಯೊಂದಿಗೆ 2011ರ ವಿಶ್ವಕಪ್‌ ವಿಜೇತ ಭಾರತ ಕ್ರಿಕೆಟ್‌ ತಂಡದ ಸದಸ್ಯನೊಂದಿಗೆ ಸಕ್ರಿಯ ನಂಟಿದೆ
ಎನ್ನಲಾಗಿದೆ. ಈ ಸಂಬಂಧ ರಾಜಸ್ಥಾನ್‌ ಪೊಲೀಸರು ತನಿಖೆ ನಡೆಸಿ 14 ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಆದರೆ ಬಂಧಿತರೆಲ್ಲರೂ
ಜಾಮೀನು ಪಡೆದು ಹೊರಬಂದಿದ್ದಾರೆ. ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡಿದೆ.

Advertisement

ಪತ್ತೆಯಾಗಿದ್ದು ಹೇಗೆ?: 2017ರಲ್ಲಿ ಜೈಪುರದಲ್ಲಿ ರಜಪುತಾನ ಪ್ರೀಮಿಯರ್‌ ಲೀಗ್‌ ಟಿ20 ನಡೆದಿತ್ತು. ಕ್ಲಬ್‌ ಹಂತದ ಆಟಗಾರರು
ಇದರಲ್ಲಿ ಪಾಲ್ಗೊಂಡಿದ್ದರು. ಆ ಕೂಟದ ಅಂತಿಮ ಪಂದ್ಯದಲ್ಲಿ ನಿಕಟ ಸ್ಪರ್ಧೆಯಿತ್ತು. ಅಂತಹ ಪಂದ್ಯದಲ್ಲಿ ಕೊನೆಯ ಓವರ್‌ ಎಸೆದ
ಬೌಲರ್‌ ವಿಚಿತ್ರ ನಡೆ ತೋರಿದ್ದು ಅಚ್ಚರಿ ಹುಟ್ಟಿಸಿತ್ತು. ಅವರು ನಿರ್ಣಾಯಕ ಓವರ್‌ ಬರೀ ವೈಡ್‌ಗಳನ್ನು ಎಸೆದು 8 ಇತರೆ ರನ್‌
ಗಳನ್ನು ನೀಡಿದ್ದರು! ಇದರಿಂದ ಅನುಮಾನಗೊಂಡ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಕೂಟವನ್ನು ತನಿಖೆಗೊಳಪಡಿಸುವಂತೆ ಪೊಲೀಸರಿಗೆ ಮನವಿ ಮಾಡಿತ್ತು. ಇದರ ಬೆನ್ನು ಹತ್ತಿ ಹೊರಟ ಪೊಲೀಸರಿಗೆ ಹಲವು ಮಾಹಿತಿಗಳು ಲಭ್ಯವಾಗಿವೆ. ಇಂತಹ ಕೂಟಗಳನ್ನು ನಡೆಸುವ ವ್ಯಕ್ತಿಗಳು ಬರೀ ವಾರಕ್ಕೆ 2, 3 ಕೋಟಿ ರೂ. ದುಡಿಯುತ್ತಾರೆಂದು ಪೊಲೀಸ್‌ ಮೂಲಗಳು ಹೇಳಿವೆ. ಕೂಟದ ಹಿಂದಿನ ಮೆದುಳು, ಸಂಘಟಕರಲ್ಲೊಬ್ಬರಾದ ವ್ಯಕ್ತಿಗೆ ಭಾರತ ಕ್ರಿಕೆಟ್‌ ತಂಡದ ಪರ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಪಾಲ್ಗೊಂಡ ಆಟಗಾರನ ಪರಿಚಯವಿರುವುದು ಪತ್ತೆಯಾಗಿದೆ. ಆದರೆ ಆ ವ್ಯಕ್ತಿಗೆ ಈ ಹಗರಣದಲ್ಲ ಪಾಲಿದೆ ಎನ್ನುವುದು ಇನ್ನೂ
ಖಚಿತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next