ಮುಂಬಯಿ: ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಗಾಗಿ ಭಾರತೀಯ ಕ್ರಿಕೆಟ್ ತಂಡವು ಅಂತಿಮವಾಗಿ ತಮ್ಮ ಜೆರ್ಸಿಯನ್ನು ಅನಾವರಣಗೊಳಿಸಿದೆ. ಮೆಗಾ ಈವೆಂಟ್‌ಗಾಗಿ ಮತ್ತೆ ಆಕಾಶ-ನೀಲಿ ಬಣ್ಣಕ್ಕೆ ಬದಲಾಯಿಸಲು ಬಿಸಿಸಿಐ ನಿರ್ಧರಿಸಿದೆ. ಇದುವರೆಗೆ ಭಾರತವು ಸ್ಕೈ-ಬ್ಲೂ ಜೆರ್ಸಿಯಲ್ಲಿ ಮೂರು ಐಸಿಸಿ ಈವೆಂಟ್‌ಗಳನ್ನು ಗೆದ್ದಿದೆ.
ಇದನ್ನೂ ಓದಿ: ಸಿರಾಜ್ ಫಿಟ್ ಇರುವಾಗ ಉಮೇಶ್ ಯಾದವ್ ಯಾಕೆ?:ರೋಹಿತ್ ಶರ್ಮಾ ಹೇಳಿದ್ದೇನು?
ಬಿಡುಗಡೆ ಯಾವಾಗ ?
ಭಾರತ ಸೆಪ್ಟೆಂಬರ್ 20 ರಿಂದ ಆಸ್ಟ್ರೇಲಿಯಾ ಎದುರು ಟಿ 20 ಸರಣಿ ಆಡುತ್ತಿದೆ. ಮೊದಲ ಪಂದ್ಯ ಪಂಜಾಬ್‌ನ ಮೊಹಾಲಿಯಲ್ಲಿ ನಡೆಯುತ್ತದೆ. , ಸೆಪ್ಟೆಂಬರ್ 18 ರಂದು ಮುಂಬೈನಲ್ಲಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಿರುವ ಕಾರಣ ಟೀಮ್ ಇಂಡಿಯಾದ ಕೆಲವು ಸದಸ್ಯರು ಮುಂಬೈನಲ್ಲಿ ಹಾಜರಾಗುವ ನಿರೀಕ್ಷೆಯಿದೆ. ಎಂಪಿಎಲ್ ಸ್ಪೋರ್ಟ್ಸ್‌ನ ಪತ್ರಿಕಾ ಪ್ರಕಟಣೆಯ ಪ್ರಕಾರ, ಮುಂಬೈನ ಬ್ಯಾಂಡ್‌ಸ್ಟ್ಯಾಂಡ್ ಪ್ರೋಮೋನೆಡ್ ನಲ್ಲಿ ನಡೆಯುವ ಸಮಾರಂಭದಲ್ಲಿ ಟೀಮ್ ಇಂಡಿಯಾದ ಹೊಸ ಜೆರ್ಸಿಯನ್ನು ರಾತ್ರಿ 8 ಗಂಟೆಗೆ ಅಥವಾ ನಂತರ ಬಿಡುಗಡೆ ಮಾಡಲಾಗುತ್ತದೆ.
ಏಷ್ಯಾಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಸೂಪರ್ 4 ಹಂತದಲ್ಲಿ 2 ಪ್ರಮುಖ ಪಂದ್ಯಗಳನ್ನು ಕಳೆದುಕೊಂಡಿದ್ದು, ಪಂದ್ಯಾವಳಿಯಿಂದ ಹೊರ ಬೀಳಲು ಕಾರಣವಾಯಿತು. ಮುಂಬರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳು ಟೀಮ್ ಇಂಡಿಯಾಕ್ಕೆ ಮತ್ತೊಂದು ಸುತ್ತಿನ ಅಭ್ಯಾಸವಾಗಿ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಅವರು ತಮ್ಮ ಪೂರ್ಣ-ಶಕ್ತಿಯನ್ನು ವಿನಿಯೋಗಿಸಿ ಆಡುವ ನಿರೀಕ್ಷೆಯಿದೆ.