ತಿರುವನಂತಪುರಂ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯಕ್ಕಾಗಿ ಟೀಂ ಇಂಡಿಯಾವು ತಿರುವನಂತಪುರಂಗೆ ಆಗಮಿಸಿದೆ. ಭಾರತ ಈಗಾಗಲೇ ಶ್ರೀಲಂಕಾ ವಿರುದ್ಧದ ಸರಣಿಯನ್ನು ಮೊದಲ ಎರಡು ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನು ಹೊಂದಿದ್ದರೆ, ಶ್ರೀಲಂಕಾ ಭಾನುವಾರ ತಿರುವನಂತಪುರಂನಲ್ಲಿ ಪ್ರವಾಸವನ್ನು ಗೆಲುವಿನೊಂದಿಗೆ ಮುಗಿಸಲು ಪ್ರಯತ್ನಿಸುತ್ತಿದೆ.
ತಿರುವನಂತಪುರಂಗೆ ಆಗಮಿಸಿದ ಟೀಂ ಇಂಡಿಯಾ ಆಟಗಾರರು ಶನಿವಾರ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಾಲ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಇದನ್ನೂ ಓದಿ:ಭೋಗಾಲಿ ಬಿಹು ಹಬ್ಬಕ್ಕೆ ಅಸ್ಸಾಂ ಸಿಎಂಗೆ ಉಡುಗೊರೆಯಾಗಿ ಬಂತು 14 ಕೆಜಿ ತೂಕದ ಮೀನು
ಭಾರತ ತಂಡ ಕೇರಳದ ರಾಜಧಾನಿಗೆ ಆಗಮಿಸಿದಾಗ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಅವರನ್ನು ಸಾಂಪ್ರದಾಯಿಕ ಮಲಯಾಳಿ ಶೈಲಿಯಲ್ಲಿ ಕಥಕ್ಕಳಿ ನೃತ್ಯಗಾರರು ಮತ್ತು ಸಾಂಪ್ರದಾಯಿಕ ಕೇರಳ ಮುಂಡುಗಳೊಂದಿಗೆ ಸ್ವಾಗತಿಸಲಾಯಿತು.
ರವಿವಾರ ಮಧ್ಯಾಹ್ನ ಇಲ್ಲಿನ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಲಿದೆ.