Advertisement

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

08:42 PM Jul 07, 2024 | Team Udayavani |

ನವದೆಹಲಿ: ರಾಹುಲ್ ದ್ರಾವಿಡ್ (Rahul Dravid)  ಒಬ್ಬ ಆಟಗಾರನಾಗಿ ಸಾಕಷ್ಟು ರನ್ ಗಳಿಸಿ ಭಾರತ ತಂಡವನ್ನು ಪ್ರತಿ ಬಾರಿಯೂ ದೊಡ್ಡ ಎತ್ತರಕ್ಕೆ ಕೊಂಡೊಯ್ದರು. ಹಾಗೆಯೇ ಇತ್ತೀಚೆಗೆ  ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟಿ-೨೦ ವಿಶ್ವಕಪ್‌ ನಲ್ಲಿ ಗೆದ್ದು ಭಾರತ ತಂಡ ಚಾಂಪಿಯನ್‌ ಆಗುವವರೆಗಿನ ದ್ರಾವಿಡ್‌ ಮುಖ್ಯ ಕೋಚ್‌ ಆಗಿ ಅವರ ಕೊಡುಗೆ ಗಮನದಲ್ಲಿಟ್ಟು ಭಾರತ ಸರ್ಕಾರ ಅವರಿಗೆ ಭಾರತ ರತ್ನ ನೀಡಬೇಕು ಎಂದು ಮಾಜಿ ಕ್ರಿಕೆಟಿಗ, ಬ್ಯಾಟಿಂಗ್‌ ದಿಗ್ಗಜ  ಸುನಿಲ್ ಗವಾಸ್ಕರ್ ಒತ್ತಾಯಿಸಿದ್ದಾರೆ.

Advertisement

ಕನ್ನಡಿಗ ರಾಹುಲ್ ದ್ರಾವಿಡ್ 2021 ರಲ್ಲಿ ಭಾರತ ರಾಷ್ಟ್ರೀಯ ತಂಡಕ್ಕೆ ಮುಖ್ಯ ಕೋಚ್​ ಆಗಿ ಬಂದರು. ಅಂದಿನಿಂದ, ಭಾರತವು 2022ರ ಟಿ 20 ವಿಶ್ವಕಪ್​​ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವಕಪ್​ ಫೈನಲ್​​ನಲ್ಲಿ ಸೋತಿತು. ಕೊನೆಯದಾಗಿ ಅವರ ಕೋಚಿಂಗ್ ಅವಧಿಯಲ್ಲಿ, ಮೆನ್ ಇನ್ ಬ್ಲೂ 2024 ರಲ್ಲಿ ಟಿ 20 ವಿಶ್ವಕಪ್ ಅನ್ನು ಎತ್ತಿಹಿಡಿದಿದ್ದರಿಂದ ಅವರು ಖುಷಿಯಿಂದ ನಿರ್ಗಮಿಸಿದರು.

“ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಸೋಲು ಹಾಗೂ ಅವಮಾನಗಳ ಎದುರಿಸಿದ್ದಾರೆ. ಒಬ್ಬ ಆಟಗಾರನಾಗಿ, ಬಳಿಕ ಎನ್​​ಸಿಎ ಮುಖ್ಯಸ್ಥ ಹಾಗೂ ಕೋಚ್​ ಆಗಿ 51 ವರ್ಷದ ಕ್ರಿಕೆಟಿಗ ಹಲವು ಬಾರಿ ನೋವುಗಳ ಉಂಡಿದ್ದಾರೆ. 2003 ರ ಏಕದಿನ ವಿಶ್ವಕಪ್​​ನ ಫೈನಲ್​​ನಲ್ಲಿ ಸೋತರು ಮತ್ತು ನಂತರ 2007 ರ ಆವೃತ್ತಿಯಲ್ಲಿ ದ್ರಾವಿಡ್‌ ನಾಯಕತ್ವದಲ್ಲಿ ಗುಂಪು ಹಂತದಲ್ಲಿ ನಿರ್ಗಮನವಾಗಿ ದುಃಖ ಅನುಭವಿಸಿದರು. ಆಟಗಾರ ಮತ್ತು ತರಬೇತುದಾರರಾಗಿ ಐಪಿಎಲ್ ಗೆಲ್ಲಲು ವಿಫಲರಾದರು. ವಿಶೇಷವೆಂದರೆ,  ದ್ರಾವಿಡ್  ಭಾರತ ಗಣರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಗೌರವಕ್ಕೆ ಪಾತ್ರರಾಗುವಷ್ಟು ಸಾಧನೆ ಮಾಡಿದ್ದಾರೆ” ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ದ್ರಾವಿಡ್‌ ವಿದೇಶಿ ನೆಲದಲ್ಲಿ ಅತ್ಯುತ್ತಮ ಬ್ಯಾಟರ್​ ಆಗಿದ್ದರು. ಇಂಗ್ಲೆಂಡ್​​ನಲ್ಲಿ ಗೆಲ್ಲುವಲ್ಲಿ ಟೆಸ್ಟ್ ಪಂದ್ಯಗಳ ಸರಣಿಯನ್ನು ಗೆದ್ದ ಮೂವರು ಭಾರತೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ನಂತರ ಹಿರಿಯ ತಂಡದ ತರಬೇತುದಾರರಾಗಿ ಅದ್ಭುತ ಪ್ರತಿಭೆಗಳನ್ನು ಬೆಳೆಸಿದ್ದರು ಎಂದು ಗವಾಸ್ಕರ್​ ಹೇಳಿದ್ದಾರೆ.

ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ದ್ರಾವಿಡ್ ಅವರ ಸಾಧನೆಗಳು ಎಲ್ಲಾ ಪಕ್ಷಗಳು, ಜಾತಿ, ಮತ ಮತ್ತು ಸಮುದಾಯಗಳನ್ನು ಮೀರಿವೆ. ಇಡೀ ದೇಶಕ್ಕೆ ಹೇಳಲಾಗದ ಸಂತೋಷವನ್ನು ಕೊಟ್ಟಿದ್ದಾರೆ. ಅದಕ್ಕಾಗಿಯೇ ಅವರನ್ನು ಪರಿಗಣಿಸಬೇಕು ಎಂದು ಸುನಿಲ್‌ ಗವಾಸ್ಕರ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next