ಇಂದೋರ್: 40 ವರ್ಷಗಳ ಹಿಂದೆ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಐವರು ನಿರಾಶ್ರಿತರಿಗೆ ಶುಕ್ರವಾರ, ಭಾರತ ಪೌರತ್ವ ಲಭಿಸಿದೆ.
ಭಾರತದ ನೆರೆಹೊರೆಯ ದೇಶಗಳಿಂದ ಭಾರತಕ್ಕೆ ಆಗಮಿಸುವ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯನ್ವಯ ಈ ಪೌರತ್ವ ನೀಡಲಾಗಿದೆ.
ಇಂದೋರ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಪೌರತ್ವ ದಾಖಲೆಗಳನ್ನು ಹಸ್ತಾಂತರಿಸಿದರು. ಐವರಲ್ಲಿ ಒಬ್ಬರು ಮುಸ್ಲಿಂ ಮಹಿಳೆಯೂ ಸೇರಿದ್ದಾರೆ. ಇವರಲ್ಲೊಬ್ಬರಾದ ಗೀತಾ ಎಂಬುವರು ಮಾಧ್ಯಮಗಳೊಂದಿಗೆ ಮಾತನಾಡಿ, ಭಾರತದ ಪೌರತ್ವ ಸಿಕ್ಕಿದ್ದು ತಮಗೆ ಖುಷಿ ತಂದಿದೆ ಎಂದಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರ, ಕೇರಳದಿಂದಲೇ ಶೇಕಡಾ 53 ರಷ್ಟು ಕೋವಿಡ್ ಸೋಂಕು ದಾಖಲು : ಕೇಂದ್ರ
ಇಂದೋರ್‌ನಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿರುವ 2,000 ನಿರಾಶ್ರಿತರಿದ್ದಾರೆಂಬ ಅಂದಾಜಿದೆ.