Advertisement

Pakistan ಮೂಲದ 18 ಮಂದಿ ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವ

12:36 AM Mar 18, 2024 | Team Udayavani |

ಅಹ್ಮದಾಬಾದ್‌: ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನೆಲೆಸಿರುವ ಪಾಕಿಸ್ಥಾನ ಮೂಲದ 18 ಹಿಂದೂ ನಿರಾಶ್ರಿತರಿಗೆ ಗುಜರಾತ್‌ ಗೃಹ ಖಾತೆ ರಾಜ್ಯ ಸಹಾಯಕ ಸಚಿವರಾದ ಹರ್ಷ ಸಂಘವಿ ಅವರ ನೇತೃತ್ವದಲ್ಲಿ ಭಾರತೀಯ ಪೌರತ್ವ ಒದಗಿಸಲಾಗಿದೆ.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಶಿಬಿರಕ್ಕೆ ಸಂಘವಿ ಭೇಟಿ ನೀಡಿದ್ದರು. ಈ ವೇಳೆ 18 ಮಂದಿಗೆ ಪೌರತ್ವ ಒದಗಿಸಿ, ನವ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಜತೆಯಾಗಿ ಶ್ರಮಿಸುವಂತೆ ಕರೆ ನೀಡಿದ್ದಾರೆ. ಅಫ್ಘಾನಿಸ್ಥಾನ, ಪಾಕಿ ಸ್ತಾನ, ಬಾಂಗ್ಲಾದೇಶದ ಅಲ್ಪಸಂಖ್ಯಾಕ ನಿರಾಶ್ರಿ ತರಿಗೆ ಭಾರತದ ಪೌರತ್ವವನ್ನು ಶೀಘ್ರ ಮತ್ತು ವೇಗವಾಗಿ ಸಿಗುವಂತೆ ಮಾಡಲು ಪಿಎಂ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವಿಶೇಷ ಶ್ರಮ ವಹಿಸಿದ್ದಾರೆ ಎಂದು ಸಂಘವಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next