ಚೆನ್ನೈ : ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು 2023 ರ FIDE ವಿಶ್ವಕಪ್ ರನ್ನರ್ ಅಪ್ ಆರ್. ಪ್ರಗ್ನಾನಂದ ಅವರು ಬುಧವಾರ ತವರಿಗೆ ಮರಳಿದ್ದಾರೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆಗೈದ ಪ್ರಜ್ಞಾನಂದ ಅವರಿಗೆ ಭರ್ಜರಿ ಸ್ವಾಗತ ದೊರಕಿತು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ರಾಜ್ಯದ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಚೆನ್ನೈನಲ್ಲಿ ಭೇಟಿಯಾದರು. ಸರಕಾರದ ವತಿಯಿಂದ ಪ್ರಜ್ಞಾನಂದ ಅವರಿಗೆ ಅಭಿನಂದಿಸಲಾಯಿತು.
‘ಸರಕಾರದ ವತಿಯಿಂದ ಸಿಎಂ ಮತ್ತು ಕ್ರೀಡಾ ಸಚಿವರು ನನ್ನನ್ನು ಅಭಿನಂದಿಸಿದರು, ನಾನು ಪಂದ್ಯಾವಳಿಗಳ ಬಗ್ಗೆ ವಿವರಿಸಿದ್ದೆ. ಅವರು ನನಗೆ 30 ಲಕ್ಷ ರೂಪಾಯಿಗಳನ್ನು ನೀಡಿದರು, ಇದು ನನಗೆ ಉತ್ತಮ ಪ್ರೇರಣೆ ಎಂದು ನಾನು ಭಾವಿಸುತ್ತೇನೆ. ನಾನು ಸಿಎಂ ಮತ್ತು ಕ್ರೀಡಾ ಸಚಿವರಿಗೆ ಧನ್ಯವಾದ ಹೇಳುತ್ತೇನೆ’ ಎಂದರು.
“ಅನೇಕ ಜನರು ಚೆಸ್ ಆಟವನ್ನು ಗುರುತಿಸುತ್ತಿರುವುದನ್ನು ನೋಡಲು ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದು ತುಂಬಾ ಒಳ್ಳೆಯ ಬೆಳವಣಿಗೆ. ಪ್ರತಿಯೊಬ್ಬ ಕ್ರೀಡಾಪಟುವೂ ಇದೇ ಕನಸು ಕಾಣುತ್ತಾರೆ ಮತ್ತು ಅದನ್ನು ಪಡೆಯಲು ನನಗೆ ತುಂಬಾ ಸಂತೋಷವಾಗಿದೆ” ಎಂದು ಹೇಳಿದರು.