Advertisement

ಮಕ್ಕಳ ಅಪಹರಣ, ಹಲ್ಲೆ : ಅಮೆರಿಕದಲ್ಲಿ ದ್ರವ್ಯ ವ್ಯಸನಿ ಭಾರತೀಯ ಸೆರೆ

08:46 AM May 01, 2019 | Sathish malya |

ನ್ಯೂಯಾರ್ಕ್‌ : ಇಲ್ಲಿನ ಮೆಡಿಕಲ್‌ ಸೆಂಟರ್‌ ಎದುರು ಹಿರಿಯ ಅಮೆರಿಕನ್‌ ಮಹಿಳೆಯೊಬ್ಬರು ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಕುಳಿತಿದ್ದ ಕಾರನ್ನು ಚಲಾಯಿಸಿಕೊಂಡು ಹೋದ 24 ವರ್ಷದ ಭಾರತೀಯನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಮಕ್ಕಳ ಅಪಹರಣ, ಹಲ್ಲೆ ಮತ್ತು ಕಳವಿನ ಕೇಸನ್ನು ದಾಖಲಿಸಿದ್ದಾರೆ.

Advertisement

ಆರೋಪಿ ಭಾರತೀಯನನ್ನು ದಲ್‌ವೀರ್‌ ಸಿಂಗ್‌ ಎಂದು ಗುರುತಿಸಲಾಗಿದ್ದು ಆತನು ಹೆರಾಯಿನ್‌ ಮಾದಕ ದ್ರವ್ಯ ವ್ಯಸನಿ ಎಂದು ಗೊತ್ತಾಗಿದೆ.

ಆರೋಪಿ ದಲ್‌ವೀರ್‌, ಕಾರಿನಲ್ಲಿದ್ದ 69 ವರ್ಷದ ಮಹಿಳೆ ನಿಟಾ ಕೊಬರ್ನ್ ಅವರನ್ನು ಬಲವಂತದಿಂದ ಹೊರಗೆಳೆದ. ಆತನಿಗೆ ಪ್ರತಿರೋಧ ಒಡ್ಡಿದ ಆಕೆ ಗಾಯಗೊಂಡಳು. ಆಷ್ಟಾಗುವಾಗ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಹೊರ ಜಿಗಿದು ಪಾರಾದಾರು. ಆದರೂ ಆರೋಪಿ ಕಾರನ್ನು ಚಲಾಯಿಸಿಕೊಂಡು ಹೋದ; ಬಳಿಕ ಆತನನ್ನು ಬೆನ್ನಟ್ಟಿ ಬಂಧಿಸಲಾಯಿತು ಎಂದು ಮಿಡ್ಲ್ ಟೌನ್‌ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next