Advertisement

ಇಂಡಿಯನ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ  ಮಹಾಸಭೆ

03:44 PM Sep 23, 2018 | |

ಮುಂಬಯಿ: ಉದ್ಯಮ ಕ್ಷೇತ್ರದಲ್ಲಿ ಬಂಟರ ಸಮಾಜವು ಹೆಚ್ಚು ಆಸಕ್ತಿ ವಹಿಸುತ್ತಿದ್ದು ಇಂದು ಯುವ ಜನರು ಸ್ವಂತ ಉದ್ದಿಮೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿರುವುದು ಅಭಿನಂದನೀಯ. ಬೆಳೆಯುತ್ತಿರುವ ಸಮಾ ಜದ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಉದ್ಧೇಶದಿಂದ ಇಂಡಿಯನ್‌ ಬಂಟ್ಸ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಹಲ ವಾರು ಯೋಜನೆಗಳನ್ನು ಹಾಕಿಕೊಂಡಿದೆ. ಇದರ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಇಂಡಿಯನ್‌ ಛೇಂಬರ್‌ ಆಫ್‌ ಕಾಮ ರ್ಸ್‌ ಆ್ಯಂಡ್‌ ಇಂಡಸ್ಟ್ರೀ ಇದರ ಅಧ್ಯಕ್ಷ ಕೆ. ಸಿ. ಶೆಟ್ಟಿ ಅವರು ನುಡಿದರು.

Advertisement

ಸೆ. 21 ರಂದು ಅಂಧೇರಿ ಪೂರ್ವದ ಹೊಟೇಲ್‌ ಸನ್‌ಸಿಟಿ ಇಂಟರ್‌ನ್ಯಾಷನಲ್‌ ಸಭಾಗೃಹದಲ್ಲಿ ನಡೆದ ಇಂಡಿಯನ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಇದರ 11 ನೇ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಉದ್ದಿಮೆ ಕ್ಷೇತ್ರದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.

ಸಮಯಕ್ಕೆ ಹೊಂದಿಕೊಂಡು ಬದಲಾ ವಣೆ ಯನ್ನು ತರಬೇಕಾಗುತ್ತದೆ. ಇದಕ್ಕೆ  ಉದ್ಯಮ ಕ್ಷೇತ್ರದ ಇತರರ ಅನುಭವನ ಅಗತ್ಯವಿದ್ದು, ಇಂತಹ ಒಕ್ಕೂಟಗಳಿಂದ ಸಮಾಜದ ಜನರ ಉದ್ದಿಮೆಗೆ ಹೆಚ್ಚಿನ ಪ್ರಯೋಜನವು ದೊರೆ ಯುತ್ತದೆ. ಉದ್ಯ ಮ ಕ್ಷೇತ್ರದ ಎಲ್ಲರು ಒಂದೆ ಡೆ ಸೇರಿದಾಗ ಸವಾಲುಗಳನ್ನು ಯಾವ ರೀತಿ ಯಲ್ಲಿ ಎದುರಿಸಲು ಸಾಧ್ಯ ಎಂಬುವುದರ ಬಗ್ಗೆ ಚರ್ಚಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿಕೊಂಡು ಉದ್ಯಮ ಕ್ಷೇತ್ರದಲ್ಲಿ ಬಂಟ ಸಮಾಜವನ್ನು ಇನ್ನಷ್ಟು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಸಂಸ್ಥೆಯು ಶ್ರಮಿಸುತ್ತಿದೆ ಎಂದು ನುಡಿದರು.

ಇಂಡಿಯನ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಇದರ ಉಪಾಧ್ಯಕ್ಷ ಎಸ್‌. ಬಿ. ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯು ಉದ್ಯಮ ಕ್ಷೇತ್ರದಲ್ಲಿರುವ ಬಂಟ ಬಾಂಧವರನ್ನು ಒಂದೇ ವೇದಿಕೆಗೆ ತರಲು ಶ್ರಮಿಸುತ್ತಿದೆ. ಅದಕ್ಕಾಗಿ ಹಲವಾರು ಯೋಜನೆ-ಯೋಚನೆಗಳು ಸಂಸ್ಥೆಯ ಮುಂದಿದೆ. ಔದ್ಯೋಗಿಕ ಪ್ರವಾಸದ ಆಯೋಜನೆ, ಬಂಟ ಉದ್ಯಮಿಗಳ ವಿವಿಧ ಉತ್ಪನ್ನಗಳ ಪ್ರದರ್ಶನ, ಯಶಸ್ವಿ ಬಂಟ ಉದ್ಯಮಿಗಳಗೆ ಪುರಸ್ಕಾರ ಪ್ರದಾನ, ವೆಬ್‌ಸೈಟ್‌ ಮುಖಾಂತರ ಸಂಸ್ಥೆಯ ಸದಸ್ಯರ ಒಕ್ಕೂಟ ನಿರ್ಮಾಣ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳು ಸಂಸ್ಥೆಯಿಂದ  ನೆರವೇರಲಿದೆ. ಬಂಟ್ಸ್‌ ಬಿಜಿನೆಸ್‌ ಡೈರೆಕ್ಟರಿಯನ್ನು ಸಂಸ್ಥೆಯು ಹೊರತರಲು ಮುಂದಾಗಿದ್ದು ಈ ಯೋಜನೆಗೆ ಎಲ್ಲರ ಪ್ರೋತ್ಸಾಹ, ಸಹಕಾರ ಅಗತ್ಯವಾಗಿದೆ ಎಂದು ನುಡಿದರು.

ನಿರ್ದೇಶಕರಾದ ಸಿಎ ಶಂಕರ್‌ ಶೆಟ್ಟಿ ಅವರು ಮಾತನಾಡಿ, ಆದಷ್ಟು ಬೇಗನೆ ಬಿಜಿನೆಸ್‌ ಎಕ್ಸಿಬೀಷನ್‌ನ್ನು ನಾವು ಕೈಗೊಳ್ಳಲಿದ್ದು, ಇದರ ಪ್ರಯೋಜನವನ್ನು ಪ್ರತಿಯೋರ್ವ ಸಮಾಜ ಬಾಂಧವರಿಗೂ ದೊರೆಯುವಂತಾಗಬೇಕು. ಉದ್ದಿಮೆ ಕ್ಷೇತ್ರದಲ್ಲಿ ಸಮಾಜ ಬಾಂಧವರು ಇನ್ನಷ್ಟು ಮುಂದೆ ಬರಬೇಕು ಎಂಬುವುದೇ ಸಂಸ್ಥೆಯ ಮುಖ್ಯ ಉದ್ಧೇಶವಾಗಿದೆ. ನಾವೆಲ್ಲರು ಒಂದಾಗಿ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಟಗೊಳಿಸಬೇಕು. ಇದರ ಪ್ರಯೋಜನವನ್ನು ಯುವ ಉದ್ಯಮಿಗಳು ಪಡೆಯುವಂತಾಗಲು ಸಂಸ್ಥೆಯ ಧ್ಯೇಯೋದ್ಧೇಶಗಳನ್ನು ಅವರಿಗೆ ಮನವರಿಕೆ ಮಾಡುವ ಅಗತ್ಯವಿದೆ. ಆದ್ದರಿಂದ ಒಗ್ಗಟ್ಟು ಮತ್ತು ಒಮ್ಮತದಿಂದ ಸಂಸ್ಥೆಯನ್ನು ಮುನ್ನಡೆಸೋಣ ಎಂದರು.

Advertisement

ಪ್ರಾರಂಭದಲ್ಲಿ  ಇಂಡಿಯನ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಇದರ ಅಧ್ಯಕ್ಷ ಕೆ. ಸಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಗಣ್ಯರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಡಿ. ಕೆ. ಶೆಟ್ಟಿ ಅವರು ಪ್ರಾರ್ಥನೆಗೈದರು. ಅಧ್ಯಕ್ಷ ಕೆ. ಸಿ. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಕೆ. ಜಯ ಸೂಡಾ ಅವರು ಸಂಸ್ಥೆಯ ವಾರ್ಷಿಕ ವರದಿ ಮತ್ತು ವಾರ್ಷಿಕ ಲೆಕ್ಕಪತ್ರವನ್ನು ವಾಚಿಸಿ ಸರ್ವಾನುಮತದಿಂದ ಅಂಗೀಕರಿಸಿಕೊಂಡರು. ವಾರ್ಷಿಕ ಮಹಾಸಭೆಯ ಆನಂತರ ಪ್ರಸಿದ್ಧ ಮನೋತಜ್ಞ ಡಾ| ಹರೀಶ್‌ ಶೆಟ್ಟಿ ಅವರಿಂದ ಮೈಂಡ್‌-ಮೂಡ್ಸ್‌ ಆ್ಯಂಡ್‌ ಮನಿ ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಡಾ| ಹರೀಶ್‌ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಅಧ್ಯಕ್ಷರು, ಪದಾಧಿಕಾರಿಗಳು ಗೌರವಿಸಿದರು. ಸಭೆಯಲ್ಲಿ ಇಂಡಿಯನ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಇದರ ಗೌರವ ಕೋಶಾಧಿಕಾರಿ ಡಿ. ಪಿ. ರೈ, ಜತೆ ಕಾರ್ಯದರ್ಶಿ ಪಿ. ಕೆ. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್‌ ಶೆಟ್ಟಿ, ನಿರ್ದೇಶಕರುಗಳಾದ ಬಾಲಕೃಷ್ಣ ಶೆಟ್ಟಿ, ಕೆ. ಎಂ. ಶೆಟ್ಟಿ, ಪಾಂಡುರಂಗ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಪ್ರಾದೇಶಿಕ ಸಮಿತಿಗಳ ಪದಾಧಿ ಕಾರಿಗಳು, ವಿವಿಧ ಬಂಟ ಸಂಘಟನೆಗಳ ಪದಾಧಿಕಾರಿಗಳು, ಬಂಟ ಸಮಾಜದ ಯುವ ಉದ್ಯಮಿಗಳು, ಸಂಸ್ಥೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶ್ರೀನಾಥ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನಿಶಿತ್‌ ಶೆಟ್ಟಿ ಅವರು ಉಪನ್ಯಾಸಕ ಡಾ| ಹರೀಶ್‌ ಶೆಟ್ಟಿ ಅವರನ್ನು ಪರಿಚಯಿಸಿದರು. ಗೌರವ ಪ್ರದಾನ ಕಾರ್ಯದರ್ಶಿ ಜಯ ಸೂಡಾ ಅವರು ವಂದಿಸಿದರು. ಸಭೆಯಲ್ಲಿ ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 
ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next