Advertisement

ಆಸೀಸ್‌ ಬ್ಯಾಡ್ಮಿಂಟನ್‌: ಮನು ಅತ್ರಿ-ಸುಮಿತ್‌ ಔಟ್‌

06:20 AM May 13, 2018 | Team Udayavani |

ಸಿಡ್ನಿ: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಪುರುಷರ ವಿಭಾಗದ ಡಬಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಮನು ಅತ್ರಿ-ಸುಮಿತ್‌ ರೆಡ್ಡಿ ಸೋಲುಂಡು ನಿರಾಸೆ ಅನುಭವಿಸಿದ್ದಾರೆ. ಇವರು ಇಂಡೋನೇಶ್ಯದ ಬೆರ್ರಿ ಅಂಗ್ರಿಯವಾನ್‌-ಹಾರ್ಡಿಯಾಂಟೊ ವಿರುದ್ಧ 17-21, 15-21 ನೇರ ಗೇಮ್‌ಗಳ ಅಂತರದಿಂದ ಸೋಲು ಅನುಭವಿಸಿದರು.

Advertisement

ಇದರೊಂದಿಗೆ ಕೂಟದಲ್ಲಿ ಭಾರತದ ಹೋರಾಟಕ್ಕೆ ತೆರೆ ಬಿತ್ತು. ಸಮೀರ್‌ ವರ್ಮ ಹಾಗೂ ಬಿ. ಸಾಯಿ ಪ್ರಣೀತ್‌ ಶುಕ್ರವಾರ ನಡೆದ ಪುರುಷರ ವಿಭಾಗದ ಸಿಂಗಲ್ಸ್‌ ಪಂದ್ಯದಲ್ಲಿ ಸೋತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next