Advertisement

ಆರಂಭವಾಗಲಿದೆ ಇಂಡಿಯನ್‌ ಬಾಕ್ಸಿಂಗ್‌ ಲೀಗ್‌!

05:02 PM Apr 29, 2019 | keerthan |

ಹೊಸದಿಲ್ಲಿ: ಕ್ರಿಕೆಟ್‌ನಲ್ಲಿ “ಇಂಡಿಯನ್‌ ಪ್ರೀಮಿಯರ್‌ ಲೀಗ್‌’ ಆರಂಭವಾದ ಅನಂತರ ಫ‌ುಟ್‌ಬಾಲ್‌, ಕಬಡ್ಡಿ ಮೊದಲಾದ ಕ್ರೀಡೆಗಳಲ್ಲೂ ಲೀಗ್‌ ಕೂಟಗಳು ಆರಂಭವಾಗಿ ಯಶಸ್ಸು ಗಳಿಸುತ್ತಿರುವುದು ಗೊತ್ತೇ ಇದೆ. ಇದರ ಬೆನ್ನಲ್ಲೇ ಭಾರತೀಯ ಬಾಕ್ಸಿಂಗ್‌ ಫೆಡರೇಶನ್‌ (ಬಿಎಫ್ಐ) ಇಂಡಿಯನ್‌ ಬಾಕ್ಸಿಂಗ್‌ ಲೀಗ್‌ ಆರಂಭಿಸಲು ನಿರ್ಧರಿಸಿರುವುದು ಹೊಸ ಬೆಳವಣಿಗೆ.

Advertisement

ಜುಲೈ 20ರಿಂದ ಆಗಸ್ಟ್‌ 11ರ ತನಕ ಬಾಕ್ಸಿಂಗ್‌ ಲೀಗ್‌ ನಡೆಯಲಿದೆ. ಹೊಸದಿಲ್ಲಿ, ಗುವಾಹಟಿ ಮತ್ತು ಪುಣೆಯಲ್ಲಿ ಸ್ಪರ್ಧೆಗಳು ನಡೆಯಲಿವೆ. ಭಾರತೀಯ ಮತ್ತು ವಿದೇಶಿ ಬಾಕ್ಸರ್‌ಗಳನ್ನು ಒಳಗೊಂಡಿರುವ 6 ನಗರ ಮೂಲದ ತಂಡಗಳು ಈ ಕೂಟದಲ್ಲಿ ಸ್ಪರ್ಧಿಸುತ್ತವೆ. ಪುರುಷರ ವಿಭಾಗದಲ್ಲಿ 52, 57, 69 ಮತ್ತು 75 ಕೆಜಿ ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದರೆ, ವನಿತಾ ವಿಭಾಗದಲ್ಲಿ 51 ಮತ್ತು 60 ಕೆಜಿ ತೂಕ ವಿಭಾಗದ ಸ್ಪರ್ಧೆ ಇರಲಿದೆ.

“ಇಂತಹ ಲೀಗ್‌ಗಾಗಿ ಹಲವು ವರ್ಷಗಳಿಂದ ನಾವು ಕಾಯುತ್ತಿದ್ದೇವು. ಈ ಲೀಗ್‌ನಲ್ಲಿ ಪಾಲ್ಗೊಳ್ಳಲು ನಾವು ಉತ್ಸುಕರಾಗಿದ್ದೇವೆ’ ಎಂದು ಏಶ್ಯನ್‌ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತ ಕವೀಂದರ್‌ ಸಿಂಗ್‌ ಬಿಷ್ಟ್ ಹೇಳಿದ್ದಾರೆ.

ಒಂದು ತಂಡದಲ್ಲಿ 14 ಬಾಕ್ಸರ್
ಪ್ರತಿಯೊಂದು ಫ್ರಾಂಚೈಸಿಗಳು ಒಟ್ಟು 14 ಬಾಕ್ಸರ್‌ಗಳನ್ನು ಹೊಂದಿರುತ್ತವೆ. ಇದರಲ್ಲಿ ಓರ್ವ ವೃತ್ತಿಪರ ಬಾಕ್ಸರ್‌, 8 ಭಾರತೀಯ ಬಾಕ್ಸರ್‌ಗಳಿರುತ್ತಾರೆ. 14ರಲ್ಲಿ ಒಬ್ಬ ಭಾರತೀಯ ಜೂನಿಯರ್‌ ಬಾಕ್ಸರ್‌ ಇದ್ದರೂ ಸ್ಪರ್ಧಿಸುವ ಅವಕಾಶ ಇರುವುದಿಲ್ಲ.

“ಈ ಲೀಗ್‌ ದೇಶದಲ್ಲಿ ಬಾಕ್ಸಿಂಗ್‌ ಜನಪ್ರಿಯತೆಯನ್ನು ಹೆಚ್ಚಿಸಲಿದೆ. ವಿಶ್ವ ಚಾಂಪಿಯನ್‌ಶಿಪ್‌ ಮುನ್ನ ಭಾರತೀಯ ಬಾಕ್ಸರ್‌ಗಳಿಗೆ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನೆರವಾಗಲಿದೆ. ಇದರೊಂದಿಗೆ ಬಾಕ್ಸರ್‌ಗಳಿಗೆ ಹಣಕಾಸಿನ ನೆರವು ಕೂಡ ದೊರಕಲಿದೆ’ ಎಂದು ಬಿಎಫ್ಐ ಉಪಾಧ್ಯಕ್ಷ ರಾಜೇಶ್‌ ಭಂಡಾರಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next