Advertisement
ದಿಲ್ಲಿಯ ಗಾಜಿಯಾಪುರಕ್ಕೆ ತನ್ನ ಸಹಚರನನ್ನು ಭೇಟಿ ಯಾಗಲು ಬರುತ್ತಿದ್ದಾನೆಂಬ ಮಾಹಿತಿ ಪಡೆದ ಪೊಲೀಸರ ತಂಡ, ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತನಿಂದ 9 ಎಂಎಂ ಪಿಸ್ತೂಲು, 5 ಕ್ಯಾಟ್ರಿìಡ್ಜ್ ಗನ್ನು ವಶಪಡಿಸಿಕೊಳ್ಳಲಾಗಿದೆ.
ಪಾತಕಿ ಖುರೇಷಿ, ಮಧ್ಯಪ್ರದೇಶದ ರಾಂಪುರದವನು. ವಿದ್ಯಾರ್ಥಿಯಾಗಿದ್ದಾಗಲೇ ಸಿಮಿ ಕಾರ್ಯಕರ್ತ. ಅಹ್ಮದಾ ಬಾದ್, ಮುಂಬಯಿ ಸ್ಫೋಟಗಳಷ್ಟೇ ಅಲ್ಲದೆ ದಿಲ್ಲಿ, ಬೆಂಗ ಳೂರುಗಳಲ್ಲಿ ಈ ಹಿಂದೆ ನಡೆದ ಕೆಲವು ವಿಧ್ವಂಸಕ ಕೃತ್ಯಗಳಿಗೂ ಈತನ ನಂಟು ಇತ್ತು. ವಿದೇಶಕ್ಕೆ ಹೋಗಿ ವಾಪಸಾಗಿದ್ದ ಈತ ಮತ್ತೆ ಭಾರತದಲ್ಲಿ ಸಿಮಿ, ಐಎಂ ಉಗ್ರ ಸಂಘಟನೆಗಳನ್ನು ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದ.
Related Articles
ಒಂದು ಕಾಲದಲ್ಲಿ ಶಾಲಾ ಶಿಕ್ಷಕನಾಗಿ, ಅನಂತರ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದ ಖುರೇಷಿಗೆ ಉಗ್ರ ರಿಯಾಜ್ ಭಟ್ಕಳ್ ಜತೆಗೂ ನಂಟಿತ್ತು. 2015ರ ಆರಂಭದಲ್ಲಿ ಖುರೇಷಿ ನೇಪಾಲದಲ್ಲಿದ್ದಾಗ ಭಟ್ಕಳ್ ಜತೆ ಸಂಪರ್ಕವಿಟ್ಟುಕೊಂಡಿದ್ದ. ಅಲ್ಲೇ ಆತ ನೇಪಾಲದ ಮತದಾರರ ಪಟ್ಟಿಯಲ್ಲಿ ಹೆಸರೂ ಸೇರಿಸಿಕೊಂಡಿದ್ದ. ಪಾಸ್‌ಪೋರ್ಟ್ ಪಡೆದಿದ್ದ. 2015ರ ಫೆಬ್ರವರಿ- ಮಾರ್ಚ್‌ನಲ್ಲಿ ಭಟ್ಕಳ್‌ನ ಸೂಚನೆ ಮೇರೆಗೆ ಖುರೇಷಿ ಸೌದಿ ಅರೇಬಿಯಾಗೆ ಹೋಗಿದ್ದ.
Advertisement