Advertisement
ಇತ್ತೀಚೆಗೆ ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಲ್ಲಿ 16 ಮಂದಿ ಬಿಹಾರ ರೆಜಿಮೆಂಟ್‌ಗೆ ಸೇರಿದವರು.
1758ರಲ್ಲಿ ರಾಬರ್ಟ್ ಕ್ಲೈವ್, ಬೆಂಗಾಲ್ ಪ್ರಸಿಡೆನ್ಸಿಯ ಗವರ್ನರ್ ಆದಾಗ, ಭಾರತೀಯ ಸೇನೆಯ 34ನೇ ಬೆಟಾಲಿಯನ್ ಸ್ಥಾಪಿಸಿದರು. ಅದರಲ್ಲಿ ಹೆಚ್ಚಿವರು ಇದ್ದಿದ್ದು ಬಿಹಾರಿಗರೇ. ಆಗ ಅದಕ್ಕಿದ್ದ ಹೆಸರು ‘ಬೆಂಗಾಲ್ ನೇಟಿವ್ ಇನ್ ಫೆಂಟ್ರಿ’. ಬಕ್ಸಾರ್, ಕರ್ನಾಟಕ, ಮರಾಠವಾಡಾ, ಅಷ್ಟೇ ಏಕೆ ಮಲಾಯಾ, ಸುಮಾತ್ರಾ, ಈಜಿಪ್ಟ್ಗಳಲ್ಲೂ ಈ ಪಡೆ ಬ್ರಿಟಿಷರ ವಸಾಹತು ವಿಸ್ತರಣೆಗೆ ಸಹಾಯ ಮಾಡಿತ್ತು.
Related Articles
1857ರಲ್ಲಿ ನಡೆದ ಸಿಪಾಯಿ ದಂಗೆಯ ವೇಳೆ, ಇದೇ ಬೆಟಾಲಿಯನ್‌ನ ಸಿಪಾಯಿಗಳು ಬ್ರಿಟಿಷರ ವಿರುದ್ಧ ತಿರುಗಿಬಿದ್ದಿದ್ದರು. ಹಾಗಾಗಿ, ಬ್ರಿಟಿಷ್ ಸರಕಾರ ಈ ಬೆಟಾಲಿಯನ್‌ನನ್ನು ರದ್ದುಗೊಳಿಸಿತು. ಆದರೆ, ಇದೇ ರೆಜಿಮೆಂಟ್‌ನ ಬಾಬು ಕುನ್ವರ್ ಸಿಂಗ್, ಬಿರ್ಸಾ ಮುಂಡಾ ಅವರು ಹೈದರಾಬಾದ್ ಸಂಸ್ಥಾನದ ಸಹಾಯದಿಂದ 19ನೇ ಹೈದರಾಬಾದ್ ರೆಜಿಮೆಂಟ್ ಕಟ್ಟಿ ಬ್ರಿಟಿಷರ ವಿರುದ್ಧ ಸೆಣಸಿದರು.
Advertisement
ಆಗ, ಆ ರೆಜಿಮೆಂಟ್‌ನ ಬಲವರ್ಧನೆಗೆ ಸಾವಿರಾರು ಸಂಖ್ಯೆಯಲ್ಲಿ ಬಿಹಾರಿ ಯೋಧರನ್ನು ಸೇರಿಸಿ ಕೊಳ್ಳಲಾಯಿತು. ಮುಂದೆ, ಹೈದರಾಬಾದ್ ಬೆಟಾಲಿಯನ್‌ನಿಂದ ಪ್ರತ್ಯೇಕಗೊಂಡ ಬಿಹಾರಿ ತುಕಡಿಗಳು 1941ರ ಸೆ. 15ರಂದು ಬಿಹಾರಿ ರೆಜಿಮೆಂಟ್ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದವು. ಪಾಟ್ನಾದ ದಾನಾಪುರ್ ದಂಡು ಪ್ರದೇಶದಲ್ಲಿ (ಕಂಟೋನ್ಮೆಂಟ್) ಈಗಲೂ ಇದರ ಕೇಂದ್ರ ಕಚೇರಿಯಿದೆ. ಇದು ಭಾರತದ ಅತ್ಯಂತ ಹಳೆಯ ದಂಡು ಪ್ರದೇಶ.
ಅಡ್ಡ ಹೆಸರು: ವೀರ್ ಬಿಹಾರೀಸ್, ಕಿಲ್ಲರ್ ಮೆಷೀನ್ಸ್, ಜಂಗಲ್ ವಾರಿಯರ್ಸ್, ಬಜರಂಗ್ ದಳ ಸೇನೆ, ಬಿರ್ಸಾ ಮುಂಡಾ ಸೇನೆ.ಪ್ರಮುಖ ಯುದ್ಧಗಳು, ಗೌರವಗಳು, ಹೆಗ್ಗಳಿಕೆಗಳು
– ಬರ್ಮಾ ಲಡಾಯಿಯಲ್ಲಿ ಭಾಗವಹಿಸಿದ್ದಕ್ಕೆ ‘ಹಾಕಾ’, ‘ಗಂಗಾವ್’, ‘ಥಿಯೇಟರ್ ಆನರ್’ ಗೌರವ. – 1965 ಮತ್ತು 1971ರ ಇಂಡೋ-ಪಾಕಿಸ್ಥಾನ್ ಯುದ್ಧದಲ್ಲಿ ಭಾಗಿ. – 1999ರ ಕಾರ್ಗಿಲ್ ಯುದ್ಧದಲ್ಲಿ ಎದುರಾಳಿಗಳ ಹಿಮ್ಮೆಟ್ಟಿಸಿದ ಹಿರಿಮೆ. – ಕಾರ್ಗಿಲ್ ಯುದ್ಧಕ್ಕೂ ಮುನ್ನ ಪಾಕ್ ಸೈನಿಕರ ವಶವಾಗಿದ್ದ ಜುಬಾರ್ ಹಿಲ್ಸ್ ಮರು ವಶ. – 1993-94ರಲ್ಲಿ ಸೊಮಾಲಿಯಾದಲ್ಲಿ, 2004, 2009, 2014ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಭಾಗಿ. – ತನ್ನ ಅಧೀನದಲ್ಲಿ ನಾಲ್ಕು ರಾಷ್ಟ್ರೀಯ ರೈಫಲ್ಸ್ ಪಡೆ (4ಆರ್‌ಆರ್, 24ಆರ್‌ಆರ್, 47 ಆರ್‌ಆರ್, 53 ಆರ್‌ಆರ್) ಕಟ್ಟಿದ ಹೆಗ್ಗಳಿಕೆ.