Advertisement

ಯಾವಾಗ ಬೇಕಾದ್ರೂ ಗಡಿಯೊಳಗೆ ನುಗ್ಗಿ ನಮ್ಮ ಸೇನೆ ದಾಳಿ ನಡೆಸಬಹುದು!

04:52 PM Sep 07, 2017 | Team Udayavani |

ಜಮ್ಮು: ಒಂದು ವೇಳೆ ಭವಿಷ್ಯದಲ್ಲಿ ಅಗತ್ಯ ಬಿದ್ದಾಗ ಭಾರತೀಯ ಸೇನೆ ಗಡಿ ನಿಮಯ ಉಲ್ಲಂಘಿಸಿ, ಒಳನುಗ್ಗಿ ಶತ್ರುಗಳ ಮೇಲೆ ದಾಳಿ ನಡೆಸಬಲ್ಲವು ಎಂದು ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಪಾಕಿಸ್ತಾನ ಪದೇ, ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಕುರಿತು ಎಚ್ಚರಿಕೆ ನೀಡಿರುವ ಜನರಲ್ ಆಫೀಸರ್ ಕಮಾಂಡರ್ ಇನ್ ಚೀಫ್(ಜಿಒಸಿ) ಅನ್ಬು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮಗೆ ಯಾವಾಗ ಅಗತ್ಯ ಬೀಳುತ್ತದೋ ಆ ಸಂದರ್ಭದಲ್ಲಿ ಒಳ (ಎಲ್ ಒಸಿ) ನುಗ್ಗಿ, ದಾಳಿ ನಡೆಸಬಲ್ಲೆವು ಎಂದು ಹೇಳಿದರು.

ಕಳೆದ ವರ್ಷ ಭಾರತೀಯ ಸೇನಾಪಡೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಗಡಿ ರಕ್ಷಿಸಿಕೊಳ್ಳುವ ಬಗ್ಗೆ ಮತ್ತು ಪ್ರಚೋದನಕಾರಿ ದಾಳಿಯನ್ನು ತಡೆಗಟ್ಟಲು ಕಠಿಣ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next