Advertisement

ಚೀನಾ ಬೆದರಿಕೆ: ಎಲ್‌ಎಸಿ ಬಳಿ ಭಾರತೀಯ ಸೇನೆಯ ಕಠಿಣ ಸಮರಾಭ್ಯಾಸ

03:05 PM Oct 21, 2021 | Team Udayavani |

ಇಟಾನಗರ : ಭಾರತೀಯ ಸೈನಿಕರು ಚೀನಾದ ಕಡೆಯಿಂದ ಬರುವ ಯಾವುದೇ ಬೆದರಿಕೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿದ್ದು, ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಕಠಿಣ ಸಮರಾಭ್ಯಾಸ ನಡೆಸುತ್ತಿದ್ದಾರೆ.

Advertisement

ಭಾರತೀಯ ಸೈನಿಕರು ತವಾಂಗ್ ಸೆಕ್ಟರ್‌ನ ಪೂರ್ವ ವಲಯದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಸಮಾರಾಭ್ಯಾಸ ನಡೆಸುತ್ತಿದ್ದಾರೆ. . ಭೂಪ್ರದೇಶಗಳಲ್ಲಿ ಆಕ್ರಮಣಕಾರಿ ತರಬೇತಿ, ತೀವ್ರ ವ್ಯಾಯಾಮ ಮತ್ತು ಧ್ಯಾನವನ್ನು ಮಾಡುತ್ತಿದ್ದಾರೆ.

ಶತ್ರು ಸೇನೆಯ ಸೈನಿಕರ ಟ್ಯಾಂಕ್‌ಗಳನ್ನು ನಾಶಮಾಡಲು ಡ್ರಿಲ್ ಕೂಡಾ ಪ್ರದರ್ಶಿಸುತ್ತಿದ್ದಾರೆ.

ಯಾವುದೇ ಪರಿಸ್ಥಿತಿ ನಿರ್ವಹಿಸಲು ಶಕ್ತರಾಗಲು ಸೇನಾಪಡೆ ಸಿದ್ಧತೆ ನಡೆಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next