Advertisement

ಜಮ್ಮು-ಕಾಶ್ಮೀರ: ಪಾಕಿಸ್ತಾನದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

02:44 PM Oct 24, 2020 | Nagendra Trasi |

ನವದೆಹಲಿ: ಗಡಿಯಲ್ಲಿ ಸದಾ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನ ಸೇನೆ ಇದೀಗ ಪಾಕ್ ನ ಅತ್ಯಾಧುನಿಕ ಡ್ರೋನ್ ಅನ್ನು (ಕ್ವಾಡ್ ಕೋಪ್ಟರ್) ಭಾರತೀಯ ಸೇನೆ ಶನಿವಾರ(ಅಕ್ಟೋಬರ್ 24, 2020) ಜಮ್ಮು-ಕಾಶ್ಮೀರದ ಕೇರಾನ್ ಸೆಕ್ಟರ್ ಬಳಿ ಹೊಡೆದುರುಳಿಸಿದ ಘಟನೆ ನಡೆದಿದೆ.

Advertisement

ಜಮ್ಮು-ಕಾಶ್ಮೀರದ ಕೇರಾನ್ ಸೆಕ್ಟರ್ ಸಮೀಪದ ಗಡಿ ನಿಯಂತ್ರಣ ರೇಖೆ ಸಮೀಪ ಹಾರಾಡುತ್ತಿದ್ದ ಅತ್ಯಾಧುನಿಕ ಡ್ರೋನ್ ಅನ್ನು ಭಾರತೀಯ ಸೇನೆ ಗುಂಡು ಹೊಡೆದು ಹೊಡೆದುರುಳಿಸಿರುವುದಾಗಿ ವರದಿ ವಿವರಿಸಿದೆ.

ಪಾಕಿಸ್ತಾನದ ಕ್ವಾಡ್ ಕೋಪ್ಟರ್ ಅನ್ನು ಚೀನಾ ಕಂಪನಿ ಡಿಜೆಐ ಮಾವಿಕ್ 2ನ ಪ್ರೊ ಮಾಡಲ್ ನದ್ದಾಗಿದ್ದು, ಇದು ಭಾರತದ ಪ್ರದೇಶದೊಳಕ್ಕೆ ಹಾರಾಟ ನಡೆಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ…

Advertisement

Udayavani is now on Telegram. Click here to join our channel and stay updated with the latest news.

Next