Advertisement

2017ರಲ್ಲಿ 138 ಪಾಕ್‌ ಸೈನಿಕರ ಹತ್ಯೆ

10:02 AM Jan 11, 2018 | |

ಹೊಸದಿಲ್ಲಿ: ಪದೇ ಪದೆ ಭಾರತವನ್ನು ಒಂದಲ್ಲಾ ಒಂದು ರೀತಿಯಿಂದ ಕೆಣಕುತ್ತಲೇ ಬಂದಿರುವ ಪಾಕಿಸ್ಥಾನವನ್ನು ಭಾರತೀಯ ಭದ್ರತಾ ಪಡೆ ಕಳೆದೊಂದು ವರ್ಷದ ಅಂತರದಲ್ಲಿ ಸೊಕ್ಕು ಮುರಿದು ಕೂರಿಸಿದೆ. 2017ರಲ್ಲಿ ಅಕ್ರಮವಾಗಿ ಜಮ್ಮು ಕಾಶ್ಮೀರದ ಗಡಿ ನುಸುಳಿಬಂದ ಹಾಗೂ ಯುದ್ಧತಂತ್ರಕ್ಕಾಗಿ ನಡೆಸಲಾದ ಕಾರ್ಯಾಚರಣೆ ಗಳಲ್ಲಿ ಬರೋಬ್ಬರಿ 138 ಪಾಕಿಸ್ಥಾನಿ ಯೋಧರನ್ನು ಹೊಡೆದುರುಳಿಸಿ ಪ್ರತೀಕಾರ ತೀರಿಸಿಕೊಂಡಿದೆ ಎಂದು ಗುಪ್ತಚರ ಇಲಾಖೆ ಮೂಲ ತಿಳಿಸಿದೆ.

Advertisement

ಮೂಲಗಳ ಪ್ರಕಾರ, ಪಾಕಿಸ್ಥಾನ ಯೋಧರ ಲ್ಲದೆ, ಭಯೋತ್ಪಾದನೆ ಚಟುವಟಿಕೆ ನಡೆಸಿದ 155ಕ್ಕೂ ಹೆಚ್ಚು ಮಂದಿಯನ್ನು ಕಳೆದುಕೊಂಡಿದೆ. ಅಲ್ಲದೆ, ಇದೇ ಅವಧಿಯಲ್ಲಿ ಭಾರತೀಯ ಸೇನೆಯೂ ಒಟ್ಟು 28 ಯೋಧರನ್ನು ಕಳೆದು ಕೊಂಡಿದೆ. ಪ್ರತ್ಯೇಕ ಘಟನೆಗಳಲ್ಲಿ 70 ಯೋಧರು ಗಾಯಗೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೇನಾ ವಕ್ತಾರ ಕರ್ನಲ್‌ ಅಮನ್‌ ಆನಂದ್‌, “ಪಾಕ್‌ ನಡೆಸಿದ ಎಲ್ಲಾ ದಾಳಿಯನ್ನೂ ಸೂಕ್ತವಾಗಿ ಎದುರಿಸಿ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಇಷ್ಟಾದರೂ ಪಾಕ್‌ ತನ್ನ ಚಾಳಿ ಬಿಟ್ಟಿಲ್ಲ’ ಎಂದಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ, 2017ರಲ್ಲಿ 860 ಬಾರಿ ಪಾಕಿಸ್ಥಾನವು ಕದನ ವಿರಾಮ ಉಲ್ಲಂಘಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next