Advertisement

ಗಡಿಯಲ್ಲಿ ದಾಳಿ ನಡೆಸಲು ಪಾಕ್ ಉಗ್ರರ ಸಂಚು;ತಿರುಗೇಟು ನೀಡಲು ಭಾರತೀಯ ಸೇನೆ ತೀವ್ರ ಕಣ್ಗಾವಲು

11:02 AM Sep 07, 2019 | Nagendra Trasi |

ನವದೆಹಲಿ:ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬಳಿಕ ಒಳಗೊಳಗೆ ಕುದಿಯುತ್ತಿರುವ ಪಾಕಿಸ್ತಾನ ಇದೀಗ ಗಡಿ ನಿಯಂತ್ರಣ ರೇಖೆ ಬಳಿ ಸದ್ದಿಲ್ಲದೇ ಸೇನೆಯನ್ನು ಜಮಾವಣೆ ಮಾಡುತ್ತಿದೆ. ಮತ್ತೊಂದೆಡೆ ಭಾರತದ ಸೇನೆ ಹದ್ದಿನ ಕಣ್ಗಾವಲು ಇಟ್ಟಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಆಗಸ್ಟ್ 30, 31ರಂದು ಆರ್ಮಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗ್ಯುರೆಝ್ ಸಮೀಪದ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಯೋಧರ ಜತೆ ಕಾಲ ಕಳೆದ ರಾವತ್ ಗಡಿ ಭಾಗದಲ್ಲಿ ಬೈನಾಕ್ಯುಲರ್ ಮೂಲಕ ಚಲನವಲಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಬಾರಾಮುಲ್ಲಾ ಮೂಲದ 19 ಇನ್ ಫ್ಯಾಂಟ್ರಿಯ ಮಾಜಿ ಜನರಲ್ ಅಧಿಕಾರಿ ಹಾಗೂ 15ಸಾವಿರಕ್ಕೂ ಅಧಿಕ ಯೋಧರು ಬೀಡು ಬಿಟ್ಟಿದ್ದಾರೆಂದು ವರದಿ ವಿವರಿಸಿದೆ.

ಗಡಿ ನಿಯಂತ್ರಣ ರೇಖೆ ಬಳಿ ಸೇನೆಯ ತಯಾರಿ ಪರಿಶೀಲನೆಯ ಫೋಟೋಗ್ರಾಫ್ಸ್ ಅನ್ನು ಸೇನೆಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಗಡಿನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ನಿಕಟವಾಗಿ ಕಣ್ಗಾವಲಿಸಿರುವುದಾಗಿ ಹೇಳಿದೆ.

ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆ ನಡೆಸಲು ತೀವ್ರ ರೀತಿಯಲ್ಲಿ ಹವಣಿಸುತ್ತಿರುವುದಾಗಿ ಇತ್ತೀಚೆಗೆ ಬಂಧನಕ್ಕೊಳಗಾಗಿರುವ ಪಾಕ್ ಉಗ್ರರು ಬಾಯ್ಟಿಟ್ಟಿರುವ ಮಾಹಿತಿ ಮೇರೆಗೆ ಭಾರತೀಯ ಸೇನೆ ಗಡಿ ಭಾಗದಲ್ಲಿ ಸೇನಾ ಚಟುವಟಿಕೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.

Advertisement

ಸೇನಾ ಮೂಲಗಳ ಪ್ರಕಾರ, ಗಡಿನಿಯಂತ್ರಣ ರೇಖೆ ಸಮೀಪದ ಉಗ್ರರ ಶಿಬಿರ ಮತ್ತು ಲಾಂಚ್ ಪ್ಯಾಡ್ ಸಕ್ರಿಯಗೊಂಡಿದ್ದು, ಇದರಲ್ಲಿ ಮಾನ್ ಶೇರಾ, ಕೋಟ್ಲಿ ಮತ್ತು ಮುಜಾಫರಾಬಾದ್ ನಲ್ಲಿ ಉಗ್ರರ ಶಿಬಿರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಹೊಸ ಉಗ್ರರನ್ನು ನೇಮಕಾತಿ ಮಾಡಿ ತರಬೇತಿ ನೀಡಿ ಭಾರತದ ಗಡಿಭಾಗದಲ್ಲಿ ಯಾವುದೇ ಸಮಯದಲ್ಲೂ ದಾಳಿ ನಡೆಸಲು ಪಾಕ್ ಸಂಚು ರೂಪಿಸಿರುವುದಾಗಿ ವಿವರಿಸಿದೆ. ಗಡಿಭಾಗದ ಲಾಂಚ್ ಪ್ಯಾಡ್ ನಲ್ಲಿ ನೂರಕ್ಕೂ ಅಧಿಕ ಉಗ್ರರನ್ನು ಪಾಕ್ ನಿಯೋಜಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next