Advertisement
ಭಾರತೀಯ ಸೇನೆಯ ಧ್ಯೇಯವಾಕ್ಯವಾದ “ಸೇವಾ ಪರಮೋ ಧರ್ಮ’ ಎಂಬುದಕ್ಕೆ ಈ ವರ್ಷದ ಘೋಷವಾಕ್ಯವೂ ಪೂರಕವಾಗಿದ್ದು, ಭಾರತೀಯ ಸೇನೆ ರಾಷ್ಟ್ರ ಸೇವೆ ಮತ್ತು ನಾಗರಿಕರ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡುವುದನ್ನು ಸೂಚಿಸುತ್ತದೆ. ಇದು ಭಾರತದ ಸಾರ್ವಭೌಮತ್ವ, ಪ್ರಾದೇಶಿಕ ಏಕತೆಯನ್ನು ರಕ್ಷಿಸುವಲ್ಲಿ ಭಾರತದ ಪಾತ್ರ ಮತ್ತು ಸೇನಾ ಸಿಬ್ಬಂದಿಯ ತ್ಯಾಗ, ಸಮರ್ಪಣಾ ಭಾವಗಳನ್ನು ಪ್ರದರ್ಶಿಸುತ್ತದೆ.
Related Articles
Advertisement
2023ನೇ ವರ್ಷವನ್ನು “ಬದಲಾವಣೆಯ ವರ್ಷ’ ಎಂದು ಘೋಷಿಸಿದ ಬಳಿಕ ಭಾರತೀಯ ಸೇನೆ ತನ್ನ ವಿಧಾನವನ್ನು ಸಾಕಷ್ಟು ಬದಲಾಯಿಸಿಕೊಂಡಿದೆ. ಈ ಬದಲಾವಣೆಗಳಲ್ಲಿ ಆರ್ಟಿಲರಿ ಅಭಿವೃದ್ಧಿ, ಅಗ್ನಿವೀರ್ ಯೋಜನೆಯಡಿ ಹೊಸ ಯೋಧರ ನೇಮಕ, ಕೆಲವು ವಿಭಾಗಗಳ ಗಾತ್ರವನ್ನು ಕಡಿಮೆಗೊಳಿಸುವುದು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸುವುದು ಸೇರಿವೆ. ಜನವರಿ 15ರ ಸೇನಾ ದಿನಾಚರಣೆಗೆ ಪೂರ್ವಭಾವಿಯಾಗಿ ಮಾತನಾಡಿದ ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆಯವರು ಸೇನೆ ಹೊಸ ಆಲೋಚನೆಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಅಭಿವೃದ್ಧಿ ಹೊಂದುವ ಗುರಿ ಇಟ್ಟುಕೊಂಡಿದೆ ಎಂದಿದ್ದಾರೆ. ಅವರು ಭಾರತೀಯ ಸೇನೆಯನ್ನು ಹೆಚ್ಚು ಆಧುನಿಕ ಮತ್ತು ಕ್ಷಿಪ್ರವಾಗಿ ಪ್ರತಿಕ್ರಿಯಿಸುವ ಪಡೆಯನ್ನಾಗಿಸುವ ಮತ್ತು ದೇಶೀಯವಾಗಿ ನಿರ್ಮಿಸಿರುವ ಆಯುಧಗಳು ಮತ್ತು ತಂತ್ರಜ್ಞಾನಗಳನ್ನು ಬಳಸುವ ಗುರಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಜನರಲ್ ಮನೋಜ್ ಪಾಂಡೆಯವರು ಮಹತ್ವದ ಬದಲಾವಣೆಗಳನ್ನು ತರುವಲ್ಲಿ ತಂತ್ರಜ್ಞಾನದ ಪಾತ್ರವನ್ನು ವಿವರಿಸಿದ್ದಾರೆ. ಅವರು ಆಧುನಿಕ ತಂತ್ರಜ್ಞಾನವನ್ನು ಬಳಸುವ ಕುರಿತು ಭಾರತೀಯ ಸೇನೆಯ ನಿರ್ಧಾರ ಹಲವು ಬದಲಾವಣೆಗಳನ್ನು ಸಾಧಿಸಲು ಮಹತ್ವದ ಅಂಶವಾಗಿದ್ದು, ಕಾರ್ಯಾಚರಣಾ ಮತ್ತು ಸಾಗಾಣಿಕಾ ಅಗತ್ಯಗಳಿಗೆ ಬೇಕಾದ ಪ್ರಾವೀಣ್ಯತೆ ಒದಗಿಸುತ್ತದೆ ಎಂದಿದ್ದಾರೆ. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು, ಭಾರತೀಯ ಸೇನೆ ಭಾರತದ ರಕ್ಷಣಾ ಉದ್ಯಮದೊಡನೆ ಜೊತೆಯಾಗಿ ಕಾರ್ಯಾಚರಿಸಲಿದೆ ಎಂದಿದ್ದಾರೆ.
ಜನರಲ್ ಮನೋಜ್ ಪಾಂಡೆಯವರು ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಮಿಲಿಟರಿ ಸಾಮರ್ಥ್ಯ ನಿರ್ವಹಿಸುವ ಪ್ರಮುಖ ಪಾತ್ರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಅವರು ಭಾರತೀಯ ಸೇನಾಪಡೆಗಳು ದೇಶದಲ್ಲಿ ಸ್ಥಿರವಾದ, ಸುರಕ್ಷಿತವಾದ ವಾತಾವರಣ ರೂಪಿಸಲು ಬದ್ಧವಾಗಿವೆ ಎಂದಿದ್ದಾರೆ.
ಭಾರತೀಯ ಸೇನಾಪಡೆಯ ತಂತ್ರಜ್ಞಾನದ ಪ್ರಯತ್ನಗಳಲ್ಲಿ ಸೈಬರ್ ಸಾಮರ್ಥ್ಯಕ್ಕೆ ಸಂಬಂಧಿಸಿದ ಯೋಜನೆಗಳು ಮಹತ್ವದ್ದಾಗಿವೆ. ಜನರಲ್ ಮನೋಜ್ ಪಾಂಡೆಯವರು ಸೇನಾ ಸಿಬ್ಬಂದಿಗಳಿಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ಮತ್ತು ಸೈಬರ್ ಸ್ಪೇಸ್ ಅನ್ನು ಸಮರ್ಪಕವಾಗಿ ಉಪಯೋಗಿಸಲು ತರಬೇತಿ ನೀಡಲಾಗುತ್ತಿದೆ ಎಂದಿದ್ದಾರೆ. ಇದಕ್ಕಾಗಿ ವಿವಿಧ ಪ್ರಕ್ರಿಯೆಗಳು, ನಿಯಮಗಳು ಮತ್ತು ತಾಂತ್ರಿಕ ವಿಧಾನಗಳನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯಲ್ಲಿ ಪ್ರಾಜೆಕ್ಟ್ ಸಂಭವ್ ಮಹತ್ವದ್ದಾಗಿದ್ದು, ಅತ್ಯಾಧುನಿಕ 5ಜಿ ತಂತ್ರಜ್ಞಾನದಡಿ ಕಾರ್ಯಾಚರಿಸುವ ಅತ್ಯಂತ ಸುರಕ್ಷಿತ ಮೊಬೈಲ್ ವಾತಾವರಣವನ್ನು ಒದಗಿಸುತ್ತದೆ.
ಗಿರೀಶ್ ಲಿಂಗಣ್ಣಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ