ಹೊಸದಿಲ್ಲಿ: ಲಡಾಖ್ ನ ಡೆಮ್ ಚೋಕ್ ಗಡಿ ಭಾಗದಲ್ಲಿ ಚೀನಾ ಸೈನ್ಯದ ಸೈನಿಕನೋರ್ವನನ್ನು ಭಾರತೀಯ ಸೇನಾ ಪಡೆಗಳು ಸೆರೆಹಿಡಿದಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಚೀನಿ ಸೈನಿಕನು ನಾಗರಿಕ ಮತ್ತು ಮಿಲಿಟರಿ ದಾಖಲೆಗಳನ್ನು ಒಯ್ಯುತ್ತಿದ್ದ ವೇಳೆ ಭಾರತೀಯ ಸೈನಿಕರು ವಶಕ್ಕೆ ಪಡೆದಿದ್ದಾರೆ.
ಸೆರೆಸಿಕ್ಕ ಸೈನಿಕ ಕಾರ್ಪೋರಲ್ ರ್ಯಾಂಕ್ ನ ಸೈನಿಕನಾಗಿದ್ದು, ಚೀನಾದ ಮಧ್ಯ ಜೇಜ್ಯಾಂಗ್ ಪ್ರಾಂತ್ಯದ ನಿವಾಸಿಯಾಗಿದ್ದಾನೆ. ಲಡಾಖ್ ನ ಡೆಮ್ ಚೋಕ್ ಪ್ರದೇಶದಲ್ಲಿ ಭಾರತೀಯ ಸೇನೆ ಈತನನ್ನು ಸೆರೆ ಹಿಡಿದಿದ್ದು, ತಮ್ಮ ಕಸ್ಟಡಿಗೆ ಪಡೆದಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಚುನಾವಣೆಯಲ್ಲಿ ನಾನು ಸೋತರೆ ದೇಶ ತ್ಯಜಿಸಬೇಕಾದೀತು: ಡೊನಾಲ್ಡ್ ಟ್ರಂಪ್
ಸೆರೆಸಿಕ್ಕ ಸೈನಿಕ ಸೇನೆಯ ಬಂದೂಕುಗಳನ್ನು ರಿಪೇರಿ ಮಾಡುವ ಆರ್ಮರ್ ಆಗಿದ್ದು, ನಾಗರಿಕ ಮತ್ತು ಮಿಲಿಟರಿ ದಾಖಲೆಗಳನ್ನು ಒಯ್ಯುತ್ತಿದ್ದ. ಈ ಚೀನಿ ಸೈನಿಕನು ಗೂಢಚರ್ಯೆ ಕಾರ್ಯಾಚರಣೆಯಲ್ಲಿದ್ದಾನೆಯೇ ಎನ್ನುವುದರ ಕುರಿತು ಏಜೆನ್ಸಿಗಳು ತನಿಖೆ ನಡೆಸುತ್ತಿವೆ.