Advertisement

ಪಾಕಿಸ್ಥಾನದ ಸೇನಾ ಪೋಸ್ಟ್ ಗಳು ಧ್ವಂಸ : ಇಬ್ಬರು ಉಗ್ರರು ಬಲಿ

04:24 AM Feb 27, 2019 | Karthik A |

ತನ್ನ ನೆಲದಲ್ಲಿರುವ ಉಗ್ರ ಶಿಬಿರಗಳ ಮೇಲೆ ಭಾರತ ವಾಯುದಾಳಿ ನಡೆಸಿದ ಬಳಿಕ ಎಲ್.ಒ.ಸಿ.ಯಲ್ಲಿ ಪಾಕ್ ಸೈನಿಕರು ಗುಂಡಿನ ದಾಳಿಯನ್ನು ನಡೆಸುತ್ತಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ಭಾರತ – ಪಾಕಿಸ್ಥಾನ ಗಡಿ ಪ್ರದೇಶದುದ್ದಕ್ಕೂ ಅಲ್ಲಿರುವ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ಗುಂಡಿನ ದಾಳಿ ನಡೆಸುತ್ತಿದೆ. ಪಾಕಿಸ್ಥಾನವು ತನ್ನ ಸೇನಾ ಟ್ಯಾಂಕ್ ಗಳ ಮೂಲಕ ದಾಳಿ ನಡೆಸುತ್ತಿದೆ ಎಂಬ ಮಾಹಿತಿ ಸೇನಾ ಮೂಲಗಳಿಂದ ಲಭ್ಯವಾಗಿದೆ.

Advertisement

ಪಾಕಿಸ್ಥಾನದ ಗುಂಡಿನ ದಾಳಿಗೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದ್ದು ಇತ್ತ ಪಾಕ್ ನ ಐದು ಸೇನಾ ಪೋಸ್ಟ್ ಗಳನ್ನು ನಮ್ಮ ಸೇನೆ ಧ್ವಂಸ ಮಾಡಿದೆ ಎಂದು ತಿಳಿದುಬಂದಿದೆ. ಇತ್ತ ಮಾಂಜ್ ಕೋಟ್, ಪೂಂಛ್, ನೌಶೇರಾ, ರಜೌರಿ, ಅಂಖೂರ್ ಮತ್ತು ಸಿಯಾಲ್ ಕೋಟ್ ಭಾಗಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇನ್ನೊಂದೆಡೆ ಕಾಶ್ಮೀರದ ಶೋಪಿಯಾನ್ ಪ್ರಾಂತ್ಯದಲ್ಲಿ ಮನೆಯೊಳಗೆ ಅವಿತಿದ್ದ ಉಗ್ರರು ಮತ್ತು ನಮ್ಮ ಸೇನಾ ಜವಾನರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಭಾರತೀಯ ಸೇನೆಯ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next