Advertisement

ಮಂಡ್ಯದ ವಿವೇಕ್‌ ಮೂರ್ತಿ ಅಮೆರಿಕ ಆರೋಗ್ಯ ಸಚಿವ?

07:31 PM Nov 18, 2020 | mahesh |

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ರ ಸಂಪುಟದಲ್ಲಿ ಭಾರತದ ಮೂಲದವರಿಗೆ ಆಯಕಟ್ಟಿನ ಸ್ಥಾನಗಳು ಸಿಗುವ ಸಾಧ್ಯತೆಗಳಿವೆ. ಆರೋಗ್ಯ ಮತ್ತು ಮಾನವ ಸೇವೆಗಳ ಸಚಿವ ಸ್ಥಾನಕ್ಕೆ ಮಂಡ್ಯ ಮೂಲದ ವಿವೇಕ್‌ ಮೂರ್ತಿ ಹಲ್ಲೇಗೆರೆ, ಇಂಧನ ಸಚಿವ ಸ್ಥಾನಕ್ಕೆ ಸ್ಟಾನ್‌ಫೋರ್ಡ್‌ ವಿವಿಯಲ್ಲಿ ಮೆಕಾನಿಕಲ್‌ ಎಂಜಿನಿಯರಿಂಗ್‌ನ ಪ್ರಧ್ಯಾಪಕರಾಗಿರುವ ಅರುಣ್‌ ಮಜುಂದಾರ್‌ ನೇಮಕವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಜಿ ಸರ್ಜನ್‌ ಜನರಲ್‌ ಆಗಿರುವ ವಿವೇಕ್‌ ಅವರು, ಈಗಾಗಲೇ ಬೈಡೆನ್‌ ನೇಮಿಸಿರುವ ಕೊರೊನಾ ಸಲಹಾ ಸಮಿತಿಯ ಮೂವರು ಸಹ ಅಧ್ಯಕ್ಷರಲ್ಲಿ ಒಬ್ಬರಾಗಿದ್ದಾರೆ.

Advertisement

ಇಂಧನ ಸಚಿವ ಸ್ಥಾನಕ್ಕೆ ಎರ್ನೆಸ್ಟ್‌ ಮೋನಿಜ್‌, ಶವುìಡ್‌ ರಾಂಡಲ್‌ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿವೆ. ವಿವೇಕ್‌ ಮೂರ್ತಿ ಅಮೆರಿಕದ ಸರ್ಜನ್‌ ಜನರಲ್‌ ಆಗಿದ್ದ ವೇಳೆ ಮಾದಕ ವಸ್ತುಗಳ ಸೇವನೆ ತಡೆ ಮತ್ತು ಮದ್ಯ ನಿಯಂತ್ರಣ ನಿಟ್ಟಿನಲ್ಲಿ ಮಹತ್ವದ ವರದಿ ಸಲ್ಲಿಸಿದ್ದರು.

ತಮ್ಮ ಸಚಿವ ಸಂಪುಟ ಅತ್ಯಂತ ಹೆಚ್ಚು ವೈವಿಧ್ಯ ಪೂರ್ಣವಾಗಿರುವುದಾಗಿ ಬೈಡೆನ್‌ ಇತ್ತೀಚೆಗೆ ಹೇಳಿಕೊಂಡಿದ್ದರು.

ಇದೇ ವೇಳೆ ನಿಯೋಜಿತ ಅಧ್ಯಕ್ಷ, ಜೋ ಬೈಡೆನ್‌ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್‌ ರಾಷ್ಟ್ರೀಯ ಭದ್ರತಾ ಸಲಹಾ ಸಮಿತಿಯಿಂದ ಪ್ರಮುಖ ದೇಶಿಯ ಮತ್ತು ದ್ವಿಪಕ್ಷೀಯ ಬಾಂಧವ್ಯಗಳ ಬಗೆಗಿನ ಮಾಹಿತಿ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next