Advertisement

ಫೆಡ್‌ಎಕ್ಸ್‌ ಅಧ್ಯಕ್ಷ ಪದಕ್ಕೆ ಭಾರತೀಯ ಅಮೆರಿಕನ್‌ ನೇಮಕ

03:03 PM Dec 27, 2018 | Team Udayavani |

ಹ್ಯೂಸ್ಟನ್‌ : ಭಾರತೀಯ ಅಮೆರಿಕನ್‌ ರಾಜೇಶ್‌ ಸುಬ್ರಮಣಿಯನ್‌ ಅವರನ್ನು ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್‌ ಡೆಲಿವರಿ ದಿಗ್ಗಜ ಫೆಡ್‌ಎಕ್ಸ್‌ ಎಕ್ಸ್‌ಪ್ರೆಸ್‌ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಓ ಆಗಿ ನೇಮಿಸಲಾಗಿದೆ. 

Advertisement

ಸುಬ್ರಮಣಿಯನ್‌ ಅವರು ಪ್ರಕೃತ ಫೆಡ್‌ಎಕ್ಸ್‌ ಕಾರ್ಪೊರೇಶನ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರು, ಚೀಫ್ ಮಾರ್ಕೆಟಿಂಗ್‌ ಮತ್ತು ಕಮ್ಯುನಿಕೇಶನ್‌ ಆಫೀಸರ್‌ ಆಗಿ ದುಡಿಯುತ್ತಿದ್ದು ಅವರು ತಮ್ಮ ಹೊಸ ಪದಭಾರವನ್ನು 2019ರ ಜನವರಿ 1ರಿಂದ ಸ್ವೀಕರಿಸಲಿದ್ದಾರೆ. 

ಟೆನಿಸೀ ಯಲ್ಲಿ ಪ್ರಧಾನ ಕಾರ್ಯಾಲಯ ಹೊಂದಿರುವ ಈ ಕಂಪೆನಿಯ ಉನ್ನತ ಹುದ್ದೆಗೆ ನೇಮಕ ಗೊಂಡಿರುವ ಸುಬ್ರಮಣಿಯನ್‌ ಅವರು ಡೇವಿಡ್‌ ಎಲ್‌ ಕನಿಂಗಂ ಅವರ ಉತ್ತರಾಧಿಕಾರಿಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next