Advertisement
ಸ್ಟೇನ್ ಲೆಸ್ ಸ್ಟೀಲ್, ಬರ್ಚ್ ವುಡ್ ನಂತಹ ಸುಸ್ಥಿರ ಉತ್ಪನ್ನಗಳ ಸಗಟು ವ್ಯಾಪಾರದಲ್ಲಿ ತೊಡಗಿರುವ ಸಣ್ಣ ವ್ಯವಹಾರೋದ್ಯಮ ಈಕೊ ಆಲ್ ಟ್ರೇಡಿಂಗ್ ಎಲ್ ಎಲ್ ಸಿ ಸಂಸ್ಥೆಯ ಮುಖ್ಯಸ್ಥೆ ಲಲಿತಾ ಚಿತ್ತೂರು, ಕಮಲಾ ಹ್ಯಾರಿಸ್ ಉಪಸ್ಥಿತರಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಈ ಮನವಿಯನ್ನು ಇಟ್ಟಿದ್ದಾರೆ.
Related Articles
Advertisement
ಸಣ್ಣ ಉದ್ಯಮಗಳು ಎಲ್ಲಾ ಸಮುದಾಯಗಳ ನಾಡಿ ಮಿಡಿತ. ನಮ್ಮ ಸಣ್ಣ ಉದ್ಯಮಗಳ ಮಾಲಿಕರು ಕೇವಲ ಉದ್ಯಮಪತಿಗಳಲ್ಲ, ನಾಗರಿಕ ನಾಯಕರು, ಸಮುದಾಯದ ನಾಯಕರು, ಆದರ್ಶಪ್ರಾಯರು ಎಂದು ಲಲಿತಾ ಹೇಳಿದ್ದಾರೆ.
ಸಣ್ಣ ಉದ್ಯಮಗಳು ಎಲ್ಲವನ್ನೂ ಸಮುದಾಯದಿಂದ ಪಡೆದುಕೊಳ್ಳುತ್ತದೆ. ಸಮುದಾಯವನ್ನು ಉನ್ನತೀಕರಿಸುತ್ತದೆ. ಅದು ನಿಯಮಿತ ಗ್ರಾಹಕರನ್ನು ಹೊಂದಿದೆ. ಎಂದು ಲಲಿತಾ ಹೇಳಿದ್ದಾರೆ.
ಏಕಾಏಕಿ ನಾವು ನೀವು ಹೀಗೆ ಇರಬೇಕು ಎಂದು ಹೇರಿಕೆ ಹಾಕುವುದಕ್ಕಾಗುವುದಿಲ್ಲ. ಪ್ಲ್ಯಾಸ್ಟಿಕ್ ಗೆ ಪರ್ಯಾಯವಾಗಿ ಇರುವ ವಸ್ತುಗಳನ್ನು ಬಳಸುವಂತೆ ನಾವು ಸೂಚನೆಗಳನ್ನು ನೀಡಬೇಕಾಗುತ್ತದೆ. ಅವರ ಕೆಲಸವನ್ನು ನಾವು ಗೌರವಿಸಬೇಕು. ಪರಿಸರವನ್ನು ಉಳಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದು ಕಮಲಾ ಹ್ಯಾರೀಸ್ ಹೇಳಿದ್ದಾರೆ.
ಒಟ್ಟಿನಲ್ಲಿ, ಚೆನ್ನೈ ಮೂಲದ ಭಾರತೀಯ ಅಮೇರಿಕನ್ ಮಹಿಳೆ ಲಲಿತಾ ಚಿತ್ತೂರು, ದುಂಡು ಮೇಜಿನ ಸಭೆಯಲ್ಲಿ ಪ್ಲ್ಯಾಸ್ಟಿಕ್ ನೀತಿಯನ್ನು ಬೆಂಬಲಿಸಬೇಕು ಎಂದು ಕಮಲಾ ಹ್ಯಾರಿಸ್ ಅವರಲ್ಲಿ ಕೇಳಿಕೊಂಡಿದ್ದಾರೆ.
ಓದಿ :ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗೇಶ್: ಬರ್ತ್‌ಡೇಗೆ ‘ತೋತಾಪುರಿ’ ಪೋಸ್ಟರ್ ಗಿಫ್ಟ್