Advertisement

ವಾಯು ಸೇನಾ ಮುಖ್ಯಸ್ಥರೊಂದಿಗೆ ಮಿಗ್ ಯುದ್ಧ ವಿಮಾನ ಚಲಾಯಿಸಿದ ಅಭಿನಂದನ್

09:42 AM Sep 03, 2019 | Hari Prasad |

ಪಠಾಣ್ ಕೋಟ್ (ಪಂಜಾಬ್): ಭಾರತೀಯ ವಾಯು ಸೇನೆಯ ಮುಖ್ಯಸ್ಥ ಬಿ.ಎಸ್. ಧನೋವಾ ಮತ್ತು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಇಂದು ಜೊತೆಯಾಗಿ ಮಿಗ್ ವಿಮಾನದಲ್ಲಿ ಸಂಚರಿಸಿದರು. ಪಂಜಾಬ್ ನಲ್ಲಿರುವ ಪಠಾಣ್ ಕೋಟ್ ವಾಯುನೆಲೆಯಲ್ಲಿ ಇವರಿಬ್ಬರು ಮಿಗ್ 21 ಯುದ್ಧ ವಿಮಾನವನ್ನು ಯಶಸ್ವಿಯಾಗಿ ಚಲಾಯಿಸಿದರು.

Advertisement

ಕಳೆದ ಫೆಬ್ರವರಿಯಲ್ಲಿ ಬಾಲಾಕೋಟ್ ವಾಯುದಾಳಿಯ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಯುದ್ಧ ಸನ್ನಿವೇಶ ನಿರ್ಮಾಣಗೊಂಡಿದ್ದ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆಯ ಸಮೀಪ ಎರಡೂ ದೇಶಗಳ ಯುದ್ಧ ವಿಮಾನಗಳು ನಡೆಸಿದ್ದ ಡಾಕ್ ಫೈಟ್ ಸಂದರ್ಭದಲ್ಲಿ ಅಭಿನಂದನ್ ಅವರು ತಮ್ಮ ಮಿಗ್ ವಿಮಾನದ ಮೂಲಕ ಪಾಕಿಸ್ಥಾನದ ಎಫ್ 16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಮತ್ತು ಬಳಿಕ ಇವರು ಚಲಾಯಿಸುತ್ತಿದ್ದ ಮಿಗ್ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಪತನಗೊಂಡಿದ್ದ ಕಾರಣ ಪಾಕ್ ಸೈನಿಕರ ಕೈಗೆ ಸೆರೆ ಸಿಕ್ಕಿದ್ದರು.

ಬಳಿಕ ಭಾರತಕ್ಕೆ ಹಸ್ತಾಂತರಗೊಂಡಿದ್ದ ಅಭಿನಂದನ್ ಅವರು ವಿಶ್ರಾಂತಿ ರಜೆಯ ಮೇಲಿದ್ದರು. ಇದೀಗ ಸರಿಸುಮಾರು ಏಳು ತಿಂಗಳುಗಳ ಬಳಿಕ ಅಭಿನಂದನ್ ಮತ್ತೆ ವಾಯುಪಡೆಯ ಕರ್ತವ್ಯಕ್ಕೆ ಮರಳಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next