Advertisement

ವಾಯುಪಡೆಗೆ ಮತ್ತಷ್ಟು ಯುದ್ಧ ವಿಮಾನಗಳು ; ಭವಿಷ್ಯದಲ್ಲಿ 450 ಯುದ್ಧವಿಮಾನಗಳ ನಿರ್ಮಾಣ

01:01 AM May 22, 2020 | Hari Prasad |

ಹೊಸದಿಲ್ಲಿ: ಗಡಿಯಲ್ಲಿ ಚೀನಾದ ಉಪಟಳ ಹೆಚ್ಚಾಗುತ್ತಿದ್ದಂತೆ, ಭಾರತೀಯ ವಾಯುಪಡೆ ತನ್ನ ಬಲವರ್ಧನೆಗೆ ಮುಂದಾಗಿದೆ.

Advertisement

ಭವಿಷ್ಯದಲ್ಲಿ 450 ಯುದ್ಧ ವಿಮಾನಗಳನ್ನು ಭಾರತದ ಪಶ್ಚಿಮ ಹಾಗೂ ಉತ್ತರದ ಗಡಿಗಳಲ್ಲಿ ನಿಯೋಜಿಸಲು ನಿರ್ಧರಿಸಿದೆ.

’36 ರಫೇಲ್‌ ಯುದ್ಧವಿಮಾನಗಳು, 114 ಬಹು ಪಾತ್ರ ಯುದ್ಧ ವಿಮಾನಗಳು, 100 ಮಧ್ಯಮ ಶ್ರೇಣಿಯ ಯುದ್ಧವಿಮಾನ (ಎಎಂಸಿಎ) ಅಲ್ಲದೆ, 200 ತೇಜಸ್‌ ಹಗುರ ಯುದ್ಧವಿಮಾನಗಳನ್ನು (ಎಲ್‌ಸಿಎ) ಭಾರತೀಯ ವಾಯುಪಡೆ ಹೊಂದಲಿದೆ’ ಎಂದು ಐಎಎಫ್ ಮುಖ್ಯಸ್ಥ ರಾಕೇಶ್ ‌ಕುಮಾರ್‌ ಸಿಂಗ್‌ ಭದೌರಿಯಾ ಮಾಹಿತಿ ನೀಡಿದ್ದಾರೆ.

ಮೇಕ್‌ ಇನ್‌ ಇಂಡಿಯಾ ಆದ್ಯತೆ: ‘ಮಧ್ಯಮ ತೂಕದ ಮತ್ತು ರಫೇಲ್‌ ಯುದ್ಧ ವಿಮಾನಗಳನ್ನು ಮೇಕ್‌ ಇನ್‌ ಇಂಡಿಯಾ ವ್ಯಾಪ್ತಿಯಲ್ಲಿ ಖಾಸಗಿ ವಲಯದ ಉತ್ತೇಜನದೊಂದಿಗೆ ನಿರ್ಮಿಸಲಿದ್ದೇವೆ. ಮುಂದಿನ 15 ವರ್ಷಗಳಲ್ಲಿ 83 ಹಗುರ ಯುದ್ಧ ವಿಮಾನಗಳ ನಿರ್ಮಾಣ ನಮ್ಮ ಪ್ರಾಥಮಿಕ ಆದ್ಯತೆ ಆಗಿರಲಿದೆ.

ತರಬೇತಿ ವಿಭಾಗದಲ್ಲಿ ನೌಕಾಪಡೆಗೆ ಬಳಸಿ ಕೊಳ್ಳಲು 70ಎಚ್‌ಟಿಟಿ- 40 ವಿಮಾನಗಳನ್ನು ನಿರೀಕ್ಷಿಸಿದ್ದೇವೆ’ ಎಂದಿದ್ದಾರೆ. ‘ಯುದ್ಧ ವಿಮಾನಗಳನ್ನು ಸ್ಥಳೀಯವಾಗಿ ನಿರ್ಮಿ ಸಲು ಇದು ಸೂಕ್ತ ಸಮಯ. ಕೈಗಾರಿಕೆಗಳು ಉತ್ತಮ ಸಲಹೆಗ ಳೊಂದಿಗೆ ಮುಂದೆ ಬಂದು ನಿರ್ಮಾಣ ಕಾರ್ಯಕ್ಕೆ ವೇಗ ತುಂಬಬೇಕು’ ಎಂದು ಹೇಳಿದ್ದಾರೆ.

Advertisement

ಚೀನಗೆ ತಕ್ಕ ಉತ್ತರ
ಇನ್ನೊಂದೆಡೆ ಗಡಿಗಳಲ್ಲಿ ಚೀನದ ಪೀಪಲ್ಸ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) ಹದ್ದು ಮೀರಿ ವರ್ತಿಸುತ್ತಿರುವುದನ್ನು ಭಾರತೀಯ ವಾಯುಪಡೆಯೂ ಗುರುತಿಸಿದೆ.

ಈ ಬಗ್ಗೆ ವಾಯುಪಡೆ ಮುಖ್ಯಸ್ಥ ಭದೌರಿಯಾ ‘ಟೈಮ್ಸ್‌ ನೌ’ಗೆ ಸಂದರ್ಶನ ನೀಡಿದ್ದು, ‘ಲಡಾಖ್‌, ಉತ್ತರಖಂಡ, ಸಿಕ್ಕಿಂನಲ್ಲಿ ಚೀನ ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿನ ವರ್ಷಗಳಲ್ಲಿ ಚೀನ ವಾಯು ಪಡೆಯ ಚಟುವಟಿಕೆಗಳೂ ಹೆಚ್ಚಾಗುತ್ತಿವೆ. ಅವರ ಯುದ್ಧವಿಮಾನಗಳು ಎಲ್‌ಐಸಿಗೆ ಹತ್ತಿರ ಬಂದಾಗ, ನಾವು ಪ್ರೊಟೊಕಾಲ್‌ ಅನ್ವಯ ತಕ್ಕ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದೇವೆ’ ಎಂದು ವಿವರಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಏರ್‌ಲಿಫ್ಟ್ ಸವಾಲನ್ನೂ ವಾಯುಪಡೆ ಸಮರ್ಥವಾಗಿ ನಿಭಾಯಿಸಿದೆ. ಅಲ್ಲದೆ, ನಮ್ಮ ದಳದ ಸೈನಿಕರನ್ನು ಸೋಂಕಿನಿಂದ ಕಾಪಾಡುವಲ್ಲಿಯೂ ಯಶಸ್ವಿಯಾಗಿದ್ದೇವೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next