ಭೋಪಾಲ್: ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಭಾನುವಾರ ಭೋಪಾಲ್ ಬಳಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಾಯುಪಡೆ ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಆರು ಸೇನಾ ಸಿಬ್ಬಂದಿಯನ್ನು ಹೊತ್ತ ಎಎಲ್‌ಹೆಚ್ ಧ್ರುವ್ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಹಳ್ಳಿಯೊಂದರಲ್ಲಿ ‘ತುರ್ತು’ ಲ್ಯಾಂಡಿಂಗ್ ಮಾಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೋಪಾಲ್‌ನಿಂದ 60 ಕಿಮೀ ದೂರದಲ್ಲಿರುವ ಬೆರಾಸಿಯಾದಲ್ಲಿನ ಹಳ್ಳಿಯೊಂದರ ಜಮೀನಿನಲ್ಲಿ ತುರ್ತು” ಲ್ಯಾಂಡಿಂಗ್ ಮಾಡಲಾಗಿದೆ.
ಇಂದು ಬೆಳಗ್ಗೆ 8.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಹೆಲಿಕಾಪ್ಟರ್ ಭೋಪಾಲ್‌ನಿಂದ ಝಾನ್ಸಿಗೆ ತೆರಳುತ್ತಿತ್ತು. ಪೈಲಟ್ ಮತ್ತು ಐವರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಬೆರಾಸಿಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನರೇಂದ್ರ ಕುಲಾಸ್ತೆ ಅವರು ಪಿಟಿಐಗೆ ತಿಳಿಸಿದ್ದಾರೆ.